ಕೆಂಪುಹೊಳೆಯಲ್ಲಿ ಅಪಘಾತ-ಬಂಟ್ವಾಳದ ತಾಯಿ ಮಗ ದುರ್ಮರಣ
Tuesday, May 21, 2024
ಮಂಗಳೂರು: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಕೆಂಪುಹೊಳೆ ಬಳಿ ಇನೋವಾ ಕಾರು ಹಾಗೂ ಕಂಟೇನರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸ್ಥಳದಲ್ಲಿಯೇ ತಾಯಿ ಮಗ ಮೃತಪಟ್ಟಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು ಪಾಣೆಮಂಗಳೂರಿನ ಶಫೀಕ್ (20), ಸಫಿಯಾ (50) ಮೃತ ದುರ್ದೈವಿಗಳಾಗಿದ್ದು, ಇನೋವಾ ಕಾರಿನಲ್ಲಿದ್ದ ಉಳಿದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಮೃತರು ಮತ್ತು ಗಾಯಾಳುಗಳು ಬೆಂಗಳೂರಿನಿಂದ ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದರು. ಎದುರಿನಿಂದ ಬಂದ ಕಂಟೇನರ್ ಲಾರಿಗೆ ಮುಖಾ ಮುಖಿ ಡಿಕ್ಕಿಯೊಡೆದ ಪರಿಣಾಮ ಇಬ್ಬರು ಸಾವಿಗಿಡಾಗಿದ್ದಾರೆ.
ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.