ಈ ರೀತಿಯಾಗಿ ಮಾಡಿ ಕುಬೇರನ ಆಶೀರ್ವಾದ ಸಂಪಾದಿಸಿದ್ದಾರೆ ನಿಮ್ಮ ಮನೆಯಲ್ಲಿ ಎಂದಿಗೂ ಸಂಪತ್ತು ಕಡಿಮೆಯಾಗಲ್ಲ!ಸ್ಟೇಟ್
Sunday, May 12, 2024
ನಿಮ್ಮ ಜೀವನ ಸದಾ ಸುಖವಾಗಿರಬೇಕು, ಅಷ್ಟೈಶ್ವರ್ಯ ಒಲಿಯಬೇಕು ಎಂಬ ಮನಸ್ಸು ಇದ್ದಲ್ಲಿ ಕುಬೇರನ ಆಶೀರ್ವಾದ ಬಹಳ ಮುಖ್ಯ. ಕುಬೇರನ ಆಶೀರ್ವಾದ ನಿಮಗೆ ಬೇಕಾಗಿದ್ದಲ್ಲಿ ಈ ಸಲಹೆಗಳನ್ನು ಅನುಸರಿಸಿ.
ಮನೆಯ ದಕ್ಷಿಣ ಅಥವಾ ನೈಋತ್ಯ ಗೋಡೆಯ ಕಡೆಗೆ ಲಾಕರ್ ಅಥವಾ ಬೀರು ಅಳವಡಿಸಬೇಕು ಮತ್ತು ಅದರಲ್ಲಿ ಹಣವನ್ನು ಇಡಬೇಕು. ಅದರ ಬಾಗಿಲು ಉತ್ತರ ದಿಕ್ಕಿಗೆ ತೆರೆಯುವಂತೆ ವ್ಯವಸ್ಥೆ ಮಾಡಬೇಕು. ಈ ದಿಕ್ಕು ಕುಬೇರನಿಗೆ ಸಂಬಂಧಿಸಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಉತ್ತರಕ್ಕೆ ಬಾಗಿಲು ತೆರೆದರೆ ನಿಮ್ಮ ಲಾಕರ್‌ನಲ್ಲಿ ಯಾವಾಗಲೂ ಹಣ ಇರುತ್ತದೆ.
ನಿಮ್ಮ ತಿಜೋರಿ ಸದಾ ಹಣದಿಂದ ತುಂಬಿರಬೇಕು ಎಂದಾದಲ್ಲಿ ನಗದು ಲಾಕರ್ ಮುಂದೆ ಕನ್ನಡಿಯನ್ನು ಇರಿಸಿ . ನಿಮ್ಮ ಲಾಕರ್ ಚಿತ್ರವು ಕನ್ನಡಿಯಲ್ಲಿ ಗೋಚರಿಸುವಂತೆ ವ್ಯವಸ್ಥೆ ಮಾಡಿ. ಈ ರೀತಿ ಮಾಡಿದರೆ ನಿಮ್ಮ ಹಣ ದುಪ್ಪಟ್ಟಾಗುತ್ತದೆ.
ಯಾರಿಂದಲೂ ಏನನ್ನೂ ಉಚಿತವಾಗಿ ತೆಗೆದುಕೊಳ್ಳಬೇಡಿ.
ಯಾರಿಗೂ ಏನನ್ನೂ ಉಚಿತವಾಗಿ ನೀಡಬೇಡಿ. ಆದರೆ ನಿರ್ಗತಿಕರಿಗೆ ದಾನ ಮಾಡಿದರೆ ಕುಬೇರನಿಗೆ ಸಂತೋಷವಾಗುತ್ತದೆ. ಅವನು ನಿಮಗೆ ಇನ್ನಷ್ಟು ಐಶ್ಚರ್ಯ ನೀಡಿ ಕರುಣಿಸುತ್ತಾನೆ.
ನಿಮ್ಮ ಆದಾಯದ ಒಂದು ಭಾಗವನ್ನು ದತ್ತಿ ಸೇವೆಗಳಿಗೆ ಬಳಸಬೇಕು. ಇದು ನಿಮಗೆ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುವಂತೆ ಮಾಡುತ್ತದೆ. ಮನೆಗೆ ಸಮೃದ್ಧಿಯನ್ನು ತರುತ್ತದೆ.
ಕುಟುಂಬದ ಮಹಿಳೆಯರಿಗೆ ಗೌರವ ನೀಡಬೇಕು. ಏಕೆಂದರೆ ಮನೆಯ ಹೆಣ್ಣು ಮಕ್ಕಳು ಲಕ್ಷ್ಮೀ ದೇವಿಗೆ ಸಮ. ಆದ್ದರಿಂದ ಹೆಣ್ಣು ಮಕ್ಕಳಿಗೆ ಗೌರವ ನೀಡಿದರೆ ಲಕ್ಷ್ಮೀಗೆ ನೀಡಿದಂತೆ.