ಪ್ರತಿದಿನ ತಲೆ ಸ್ನಾನ ಮಾಡುವುದರಿಂದ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ...!?
Saturday, May 25, 2024
ಕೂದಲು ಉದುರುವಿಕೆ ತಡೆಯಲು ಇದನ್ನು ತಿಳಿಯಲೇಬೇಕು..ಮುಖದ ಸೌಂದರ್ಯ ಹೆಚ್ಚುವಲ್ಲಿ ಕೂದಲು ಪ್ರಮುಖ ಸ್ಥಾನ ವಹಿಸುತ್ತದೆ. ಕೂದಲಿನ ರಕ್ಷಣೆ ಬಹಳ ಮುಖ್ಯ. ಕೆಲವರು ತಮ್ಮ ಕೂದಲಿಗೆ ಏನೂ ಆಗಬಾರದು ಅಂತ ಜಾಗೃತಿ ವಹಿಸುತ್ತಾರೆ. ಈ ಪೈಕಿ ಕೆಲವು ಜನರು ಪ್ರತಿನಿತ್ಯ ತಲೆ ಸ್ನಾನ ಮಾಡುತ್ತಾರೆ, ಇನ್ನೂ ಕೆಲವು ಮಂದಿ ವಾರಕ್ಕೊಮ್ಮೆ ತಲೆ ಸ್ನಾನ ಮಾಡುತ್ತಾರೆ...
ನಮ್ಮ ದೇಹದಲ್ಲಿರುವ ಬೆವರನ್ನು ಸ್ವಚ್ಛಗೊಳಿಸಲು ಮತ್ತು ಕೊಳೆಯನ್ನು ತೆಗೆದುಹಾಕಲು ಪ್ರತಿದಿನ ಸ್ನಾನ ಮಾಡಬೇಕು. ದೇಹದಿಂದ ಬೆವರು ಬರುವಂತೆ ತಲೆಯಿಂದಲೂ ಬೆವರು ಬರುತ್ತದೆ. ನೀವು ನಿಯಮಿತವಾಗಿ ನಿಮ್ಮ ತಲೆಯನ್ನು ತೊಳೆಯದಿದ್ದರೆ, ತಲೆಹೊಟ್ಟು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಗುರಿಯಾಗಬಹುದು.
ದಿನವೂ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು. ಆದರೆ, ಕೂದಲಿಗೆ ಸಂಬಂಧಿಸಿದಂತೆ ಕೂದಲಿನ ವಿನ್ಯಾಸ ಅವಲಂಬಿಸಿ, ಪ್ರತಿದಿನ ನಮ್ಮ ತಲೆಯನ್ನು ತೊಳೆಯಬೇಕು. ಆದ್ದರಿಂದ, ನಿಮ್ಮ ಕೂದಲಿನ ವಿನ್ಯಾಸವನ್ನು ತಿಳಿದುಕೊಂದು ದಿನ ನಿತ್ಯ ಸ್ನಾನ ಮಾಡುವುದು ಉತ್ತಮ..
ಒಣ ಕೂದಲು ಹೊಂದಿರುವವರು ವಾರಕ್ಕೊಮ್ಮೆ ಅಥವಾ ಎರಡು ಬಾರಿ ತಲೆ ಸ್ನಾನ ಮಾಡಿದರೆ ಸಾಕು. ತುಂಬಾ ಒಣ ಕೂದಲು ಇರುವವರು ವಾರಕ್ಕೊಮ್ಮೆ ಮಾತ್ರ ತಮ್ಮ ಕೂದಲನ್ನು ತೊಳೆಯಬೇಕು ಎಂದು ವೈದ್ಯರು ಹೇಳುತ್ತಾರೆ. ತಲೆಹೊಟ್ಟು ಸಮಸ್ಯೆ ಇರುವವರು ಪ್ರತಿ ದಿನವೂ ತಮ್ಮ ಕೂದಲನ್ನು ತೊಳೆಯಬಹುದು.