-->
ಧರ್ಮಸ್ಥಳ ದೇವಸ್ಥಾನದಲ್ಲೂ ಬಿಡದ ರಾಜಕೀಯ- ಸಿಎಂ ಸಿದ್ದರಾಮಯ್ಯ ಭೇಟಿ ವೇಳೆ ಮೋದಿ ಪರ ಘೋಷಣೆ

ಧರ್ಮಸ್ಥಳ ದೇವಸ್ಥಾನದಲ್ಲೂ ಬಿಡದ ರಾಜಕೀಯ- ಸಿಎಂ ಸಿದ್ದರಾಮಯ್ಯ ಭೇಟಿ ವೇಳೆ ಮೋದಿ ಪರ ಘೋಷಣೆ



ಮಂಗಳೂರು: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರ ಭೇಟಿ ವೇಳೆ ಮೋದಿ ಪರ ಘೋಷಣೆ ಹಾಕಿ ಅವರಿಗೆ ಮುಜುಗರ ಮಾಡುತ್ತಿದ್ದ ಘಟನೆಗಳು ಇತ್ತೀಚೆಗೆ ನಡೆದಿದ್ದವು. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದಲ್ಲಿಯೂ ಇಂತಹ ಘಟನೆ ನಡೆದಿದೆ. ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ ಬಿಜೆಪಿ ಬೆಂಬಲಿತರು ಮುಖ್ಯಮಂತ್ರಿ ಭೇಟಿ ವೇಳೆ ಮೋದಿ ಪರ  ಘೋಷಣೆ ಕೂಗಿದ ಘಟನೆ ನಡೆದಿದೆ.

 ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ‌ ಆಗಮಿಸುತ್ತಿದ್ದಂತೆ ಭಕ್ತರಿಂದ ಮೋದಿ ಪರ ಘೋಷಣೆ, ಜೈಶ್ರ್ರೀರಾಂ ಘೋಷಣೆ ಕೇಳಿ ಬಂದಿದೆ.





ಸಿಎಂ, ಡಿಸಿಎಂ ದೇವಸ್ಥಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ  ಅವಧಿಗೂ ಮುನ್ನವೇ ಭಕ್ತರ ದೇವರ ದರ್ಶನ ಬಂದ್ ಮಾಡಲಾಗಿತ್ತು. ಒಂದು ಗಂಟೆಗೂ ಅಧಿಕ ಸಮಯದಿಂದ ದೇವರ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಆದ್ದರಿಂದ ಸಾವಿರಾರು ಮಂದಿ ಭಕ್ತರು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತ್ತು‌. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಸಿಎಂ, ಡಿಸಿಎಂ ಬಂದು ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಜೈಶ್ರೀರಾಂ, ಮೋದಿ ಪರ ಘೋಷಣೆ ಕೂಗಿದರು. ಅಲ್ಲದೆ ಆಪ್ ಕಿ ಬಾರ್ ಮೋದಿ ಸರ್ಕಾರ್ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.



 ಗಂಟೆಗಟ್ಟಲೆ ಕಾದರೂ ಒಳಗೆ ಬಿಡುತ್ತಿಲ್ಲ- ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರಿಂದ ಅಸಹನೆ



ಸಿಎಂ ಸಿದ್ದರಾಮಯ್ಯ ಆಗಮಿಸುವ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭದ್ರತಾ ದೃಷ್ಟಿಯಿಂದ ಭಕ್ತರಿಗೆ ಒಳಗೆ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಆದ್ದರಿಂದ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು ಅಸಹನೆ ವ್ಯಕ್ತಪಡಿಸಿರುವ ಘಟನೆಯು ನಡೆದಿದೆ.


ಬೆಳಗ್ಗೆ 10 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದೇವೆ. ಆದರೆ ದೇವರ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ. ಮಧ್ಯಾಹ್ನ 2.30 ಗಂಟೆಯಾದರೂ ಊಟವನ್ನೂ ಮಾಡಿಲ್ಲ. ಮಕ್ಕಳು - ಮರಿಗಳು ಜೊತೆಗಿದ್ದಾರೆ. ಅವರು ಹಸಿವಿನಿಂದ ಬಳಲುತ್ತಿದ್ದಾರೆ. ಬಹಿರ್ದೆಸೆಗೂ ಹೋಗಲಾಗುತ್ತಿಲ್ಲ. ಹೀಗಾದರೆ ಹೇಗೆ ಎಂದು ಭಕ್ತರು ಅಸಹನೆ ವ್ಯಕ್ತಪಡಿಸಿರುವುದು ಕಂಡು ಬಂದಿತು.

Ads on article

Advertise in articles 1

advertising articles 2

Advertise under the article