-->
ಮನೆಯಲ್ಲೇ ಚಿಯಾ ಸೀಡ್ ಬಳಸಿಕೊಂಡು ಸ್ಕ್ರಬ್ ತಯಾರಿಸಿಕೊಳ್ಳಿ..! ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ!

ಮನೆಯಲ್ಲೇ ಚಿಯಾ ಸೀಡ್ ಬಳಸಿಕೊಂಡು ಸ್ಕ್ರಬ್ ತಯಾರಿಸಿಕೊಳ್ಳಿ..! ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ!



ಚಿಯಾ ಸೀಡ್  ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಬೀಜ ಎಂದೆನಿಸಿದ್ದು, ದಿನಂಪ್ರತಿ ಇದರ ಬಳಕೆಯನ್ನು ಮಾಡುವುದು ಅನೇಕ ವಿಶೇಷತೆಗಳನ್ನೊಳಗೊಂಡಿದೆ.  ಒಮೆಗಾ – 3 ಫ್ಯಾಟಿ ಆಸಿಡ್‌ಗಳನ್ನೊಳಗೊಂಡಿದೆ. ಉತ್ಕರ್ಷಣ ನಿರೋಧಿ ಅಂಶಗಳೂ ಇದ್ದು ಫೈಬರ್, ಪ್ರೊಟೀನ್ ಹಾಗೂ ಬೇರೆ ಬೇರೆ ವಿಟಮಿನ್‌ಗಳು ಹಾಗೂ ಮಿನರಲ್ ಅಂಶಗಳೂ ಚಿಯಾ ಸೀಡ್‌ಗಳಲ್ಲಿದೆ.

ಇದನ್ನು ನೀರಿನಲ್ಲಿ ನೆನೆಸಿ ಸೇವಿಸಬಹುದಾಗಿದ್ದು, ಸ್ಮೂಥಿ, ಪುಡ್ಡಿಂಗ್‌ಗಳಲ್ಲೂ ಬಳಸುತ್ತಾರೆ. ದೇಹಕ್ಕೆ ಮಾತ್ರವಲ್ಲದೆ ಇದು ತ್ವಚೆಗೂ ಅತ್ಯುತ್ತಮವಾದುದು ಎಂಬುದು ನಿಮಗೆ ಗೊತ್ತೇ? ಹಾಗಿದ್ದರೆ ಚಿಯಾ ಸೀಡ್‌ನ ಅತ್ಯುತ್ತಮ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.


ಚಿಯಾ ಬೀಜ
ಹೈಡ್ರೇಶನ್ ಮಾಡುತ್ತದೆ

ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿದಾಗ ಅವುಗಳು ಜೆಲ್ ರೂಪದಲ್ಲಿ ತಯಾರಾಗುತ್ತವೆ. ಇದು ತ್ವಚೆಗೆ ಅತ್ಯುತ್ತಮ ಹೈಡ್ರೇಟರ್ ಆಗಿ ಕೆಲಸ ಮಾಡುತ್ತದೆ. ಇದನ್ನು ಮುಖಕ್ಕೆ ಹಚ್ಚುವುದು ಇಲ್ಲವೇ ಸೇವಿಸುವುದು ಮಾಡುವುದರಿಂದ ತ್ವಚೆಯ ಹೈಡ್ರೇಶನ್‌ಗೆ ನೆರವಾಗಿದೆ. ಮಾಲಿನ್ಯದ ಪರಿಸರದಲ್ಲಿರುವಾಗ ತ್ವಚೆಯ ಹೈಡ್ರೇಶನ್ ಅತಿ ಮುಖ್ಯವಾದುದು.


ಡಿಟಾಕ್ಸಿಫೈ ಮಾಡುತ್ತದೆ

ಜೀರ್ಣಕ್ರಿಯೆ ಹಾಗೂ ಡಿಟಾಕ್ಸಿಫೈ ಮಾಡಲು ಫೈಬರ್ ಅತ್ಯವಶ್ಯಕವಾದುದು. ಚಿಯಾ ಸೀಡ್‌ಗಳಲ್ಲಿ ಫೈಬರ್ ಅಂಶ ಹೇರಳವಾಗಿದ್ದು, ಜೀರ್ಣಕ್ರಿಯೆಯನ್ನು ಟ್ರ್ಯಾಕ್‌ನಲ್ಲಿರಿಸುತ್ತದೆ ಹಾಗೂ ಕರುಳಿನ ಚಲನೆಗೆ ಇದು ಸಹಕಾರಿಯಾಗಿದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ನಿವಾರಿಸಿ ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚಿಸುತ್ತದೆ.



ಮನೆಯಲ್ಲೇ ಚಿಯಾ ಸೀಡ್ ಬಳಸಿಕೊಂಡು ಸ್ಕ್ರಬ್ ತಯಾರಿಸಿಕೊಳ್ಳಿ. ಜೇನು, ಮೊಸರು, ಅಲೊವೇರಾ ಜೆಲ್‌ಗೆ ಚಿಯಾ ಬೀಜ ಸೇರಿಸಿಕೊಂಡು ನೈಸರ್ಗಿಕ ಸ್ಕ್ರಬ್ ಅನ್ನು ತಯಾರಿಸಿಕೊಳ್ಳಿ ಇದನ್ನು ಮುಖಕ್ಕೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳುವುದು ಮುಖದಲ್ಲಿ ಮೊಡವೆ, ಕಲೆಗಳನ್ನು ಹೋಗಲಾಡಿಸಿ ಹೈಡ್ರೇಶನ್‌ಗೆ ನೆರವನ್ನು ನೀಡುತ್ತದೆ.

ಚಿಯಾ ಸೀಡ್‌ ಅಂಶವುಳ್ಳ ಸಪ್ಲಿಮೆಂಟ್ಸ್ ಇಲ್ಲವೇ ಟ್ಯಾಬ್ಲೆಟ್‌ಗಳನ್ನು ನೀವು ತೆಗೆದುಕೊಳ್ಳಬಹುದು. ಚಿಯಾ ಸೀಡ್ ತೈಲದಲ್ಲಿ ಕೂಡ ಒಮೆಗಾ – 3 ಫ್ಯಾಟಿ ಆಸಿಡ್ ಇದ್ದು ಇದು ಕೂಡ ತ್ವಚೆಗೆ ಸಹಕಾರಿಯಾಗಿದೆ.


Ads on article

Advertise in articles 1

advertising articles 2

Advertise under the article