ಬೆಳ್ತಂಗಡಿ: 'ಪೊಲೀಸ್ ಠಾಣೆ ನಿಮ್ಮ ಅಪ್ಪಂದಾ' ಪಿಎಸ್ಐಗೇ ಧಮ್ಕಿ ಹಾಕಿದ ಶಾಸಕ ಹರೀಶ್ ಪೂಂಜ - ಎಫ್ಐಆರ್ ದಾಖಲು
Sunday, May 19, 2024
ಬೆಳ್ತಂಗಡಿ: ತನ್ನ ಆಪ್ತನನ್ನು ಬಂಧಿಸಿದ್ದರಿಂದ ಬೆಳ್ತಂಗಡಿ ಠಾಣೆಯ ಮುಂಭಾಗ ಧರಣಿ ನಡೆಸಿದ್ದಲ್ಲದೆ, ಠಾಣೆ ಏನು ನಿಮ್ಮ ಅಪ್ಪಂದಾ ಎಂದು ಪಿಎಸ್ಐಗೇ ಧಮ್ಕಿ ಹಾಕಿರುವ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಮೇಲೆ ಪ್ರಕರಣದ ದಾಖಲಾಗಿದೆ.
ಬೆಳ್ತಂಗಡಿಯ ಮೆಲಂತಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಲ್ಲುಕ್ವಾರೆಗೆ ತಹಶೀಲ್ದಾರ್ ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದರು. ಈ ವೇಳೆ ಕಲ್ಲುಕ್ವಾರೆ ನಡೆಸುತ್ತಿದ್ದ ಶಾಸಕ ಹರೀಶ್ ಪೂಂಜ ಆಪ್ತ, ಬೆಳ್ತಂಗಡಿ ತಾಲೂಕು ಯುವಮೋರ್ಚ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹಾಗೂ ಮತ್ತಿತರರನ್ನು ಪೊಲೀಸರು ಶನಿವಾರ ಬಂಧಿಸಿದ್ದರು. ಈ ಬಂಧನವನ್ನು ವಿರೋಧಿಸಿ ಬೆಳ್ತಂಗಡಿ ಠಾಣೆಯೆದುರು ಶಾಸಕ ಹರೀಶ್ ಪೂಂಜ ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರ ವಿರುದ್ಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಬೆಳ್ತಂಗಡಿ ಪಿಎಸ್ಐ ಮುರುಳಿಧರ್ ನಾಯ್ಕ್ ಅವರಿಗೆ ಶಾಸಕ ಹರೀಶ್ ಪೂಂಜ ಅವರು ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲುಕೋರೆ ಮಾಲಕ ಪ್ರಮೋದ್ ದಿಡುಪೆ ತಲೆಮರೆಸಿಕೊಂಡಿದ್ದಾನೆ. ಆತನ ಬಂಧಿಸಲು ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.