ಮೊಸರು -ಮೆಂತ್ಯ ಹೇರ್ ಮಾಸ್ಕ್ ಕೂದಲಿಗೆ ದಿನಾಲು ಹಚ್ಚುವುದರಿಂದ ಕೂದಲು ಕಡು ಕಪ್ಪಾಗಿ ರೇಷ್ಮೆಯ ಎಳೆಯಂತೆ ಹೊಳೆಯುವುದು..!
Saturday, May 25, 2024
ಮೊಸರು ಮೆಂತ್ಯ ಹೇರ್ ಮಾಸ್ಕ್
ಮೊಸರಿನಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಬಿ5 ಮತ್ತು ವಿಟಮಿನ್ ಡಿ ಇದೆ. ಹೀಗಾಗಿ ಕೂದಲಿನ ಆರೈಕೆಗಾಗಿ ಇದನ್ನು ಬಳಸಬಹುದು.
ಮೊಸರನ್ನು ಹಚ್ಚುವುದರಿಂದ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೇ ತಲೆಹೊಟ್ಟು ನಿವಾರಣೆಯಾಗುತ್ತದೆ. ಕೂದಲನ್ನು ಮೃದುಗೊಳಿಸುತ್ತದೆ.
ಮೊಸರು ನೆತ್ತಿಯನ್ನು ಸರಿಯಾಗಿ ಸ್ವಚ್ಛಗೊಳಿಸುತ್ತದೆ. ಕೂದಲಿಗೆ ಆಳವಾದ ಕಂಡೀಷನಿಂಗ್ ನೀಡುತ್ತದೆ. ಕೂದಲಿನ ಬೆಳವಣಿಗೆಗೆ ಕೂಡ ಮೊಸರು ಸಹಾಯ ಮಾಡುತ್ತದೆ.