ಈ ರೀತಿ ಕೆಟ್ಟ ಅಭ್ಯಾಸಗಳು ಇರುವವರ ಮನೆಯಲ್ಲಿ ಲಕ್ಷ್ಮಿ ದೇವಿ ಎಂದಿಗೂ ನೆಲೆಸುವುದಿಲ್ಲ ಎಚ್ಚರ..!
Tuesday, May 7, 2024
ಲಕ್ಷ್ಮೀದೇವಿಯು ಆಶೀರ್ವದಿಸಿ ಒಲಿಯಬೇಕೆಂದರೆ ನೀವು ಕೆಲವೊಂದು ಅಭ್ಯಾಸಗಳನ್ನು ಬಿಟ್ಟುಬಿಡಬೇಕು. ಮನುಷ್ಯನಲ್ಲಿ ಕೆಲವೊಂದು ಅಭ್ಯಾಸಗಳನ್ನು ಲಕ್ಷ್ಮೀ ಇಷ್ಟಪಡುವುದಿಲ್ಲ. ಅವುಗಳನ್ನು ತಕ್ಷಣವೇ ತ್ಯಜಿಸುವ ಮೂಲಕ ತಾಯಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.
ಲಕ್ಷ್ಮಿ ದೇವಿಯು ಸ್ವಚ್ಚತೆಯನ್ನು ಪ್ರೀತಿಸುತ್ತಾಳೆ. ಮನೆ ಕೊಳಕಾಗಿದ್ದರೆ ಆಕೆಗೆ ಇಷ್ಟವಾಗುವುದಿಲ್ಲ. ಆದ್ದರಿಂದ ನಿಯಮಿತವಾಗಿ ಮನೆಯನ್ನು ಸ್ವಚ್ಛಗೊಳಿಸಿ. ಮನೆಯ ವಸ್ತುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಮನೆ ಎಂದಿಗೂ ಕೊಳಕಾಗಿರದಂತೆ ನೋಡಿಕೊಳ್ಳಿ.
ಹಣವನ್ನು ಸುಖಾಸುಮ್ಮನೆ ವ್ಯರ್ಥ ಮಾಡುವ ಅಭ್ಯಾಸವಿರುವವರು ಕೂಡಾ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯುವುದಿಲ್ಲ. ವಿಶೇಷವಾಗಿ ಜೂಜಾಟದಂಥ ದುರಾಭ್ಯಾಸದ ಮೂಲಕ ಹಣವನ್ನು ದುರುಪಯೋಗಪಡಿಸಿಕೊಳ್ಳುವವರು ಲಕ್ಷ್ಮೀದೇವಿಯ ಆಶೀರ್ವಾದ ಪಡೆಯುವುದಿಲ್ಲ. ಅದಕ್ಕಾಗಿಯೇ ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕೆಟ್ಟ ಅಭ್ಯಾಸಗಳ ಬದಲು ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು.
ಆಹಾರವನ್ನು ತಟ್ಟೆಯಲ್ಲಿ ಹಾಗೆಯೇ ಬಿಡುವವರ ಮೇಲೆ, ಆಹಾರವನ್ನು ಗೌರವಿಸದವರ ಮೇಲೆ ಲಕ್ಷ್ಮೀ ದೇವಿಯು ಕೋಪಗೊಳ್ಳುತ್ತಾಳೆ. ಅಂಥಾ ಮನೆಯಲ್ಲಿ ಲಕ್ಷ್ಮೀ ಎಂದಿಗೂ ನೆಲೆಸುವುದಿಲ್ಲ, ಮನೆಯಲ್ಲಿ ಬಡತನವಿದ್ದು, ಕುಟುಂಬಕ್ಕೆ ಆಶೀರ್ವಾದ ಬೇಕಾದರೆ, ನೀವು ತಿನ್ನುವ ಅನ್ನವನ್ನು ಗೌರವಿಸಬೇಕು. ಬೇಕಾದಷ್ಟೇ ತಿನ್ನಬೇಕು.