Mangalore- ತಂದೆಯ ನಿಧನದ ಚಿಂತೆ- ಯುವಕ ಆತ್ಮಹತ್ಯೆ
Tuesday, May 7, 2024
ಮಂಗಳೂರು: ಮೂರು ವರ್ಷದ ಹಿಂದೆ ನಡೆದ ತಂದೆಯ ನಿಧನದ ಚಿಂತೆಯಲ್ಲಿದ್ದ ಪುತ್ರ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಗೋಳಿ ತ್ತೊಟ್ಟು ಗ್ರಾಮದ ಅನಾಲು ಎಂಬಲ್ಲಿ ಭಾನುವಾರ ನಡೆದಿದೆ.
ಗೋಳಿತ್ತೊಟ್ಟು ಗ್ರಾಮದ ಅನಾಲು ನಿವಾಸಿ ದಿ.ವಾಸಪ್ಪ ಗೌಡ ಅವರ ಪುತ್ರ ಶ್ರೀಹರ್ಷ ಗೌಡ(21) ಆತ್ಮಹತ್ಯೆ ಮಾಡಿ ಕೊಂಡವರು. ಅವರು ಮೇ 4ರಂದು ರಾತ್ರಿ ಮನೆ ಸಮೀಪ ಚಿಕ್ಕಪ್ಪ ಶೀನಪ್ಪ ಗೌಡ ಅವರ ಮಗಳ ಮದುವೆ ಔತಣಕೂಟವಿದ್ದ ಹಿನ್ನೆಲೆ ಯಲ್ಲಿ ಸಂಜೆಯ ತನಕ ಅಲ್ಲಿ ಕೆಲಸ ಮಾಡಿ ಮನೆಗೆ ಬಂದಿದ್ದರು. ಇವರ ಸಹೋದರ
ಹರ್ಷ ಮೇ 5ರಂದು ತಡರಾತ್ರಿ 2.30ಕ್ಕೆ ಬಂದಾಗ ಮನೆಯ ಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಿದಾಗ ಶ್ರೀಹರ್ಷ ನೇಣು ಬಿಗಿದುಕೊಂಡಿರುವುದು ಕಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಶ್ರೀಹರ್ಷ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಮೃತನ ತಂದೆ 3 ವರ್ಷ ಹಿಂದೆ ನಿಧನ ರಾಗಿದ್ದರು. ಅಂದಿನಿಂದಲೇ ಚಿಂತೆಯಲ್ಲಿದ್ದು, ಮನನೊಂದು ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಅಣ್ಣ ಹರ್ಷಿತ್ ಗೌಡ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.