ಚುನಾವಣೆ ಬಳಿಕ ಮೊಬೈಲ್ ಬಿಲ್ ದುಬಾರಿ?
Wednesday, May 15, 2024
ಮುಂಬಯಿ: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮೊಬೈಲ್ ಬಳಕೆದಾರರಿಗೆ ದರ ಏರಿಕೆ ಬಿಸಿ ತಟ್ಟುವ ನಿರೀಕ್ಷೆ ಇದೆ.
ಜಿಯೋ, ಏರ್ಟೆಲ್, ವಿಐ ಸೇರಿದಂತೆ ಎಲ್ಲಾ ಟೆಲಿಕಾಂ ಸೇವಾ ಕಂಪನಿಗಳು ಸೇವಾದರಗಳನ್ನು ಶೇ. 25ರಷ್ಟು ಹೆಚ್ಚಿಸಬಹುದು ಎಂದು ಟ್ರೋಕರೇಜ್ ಸಂಸ್ಥೆಯಾದ 'ಆಕ್ಸಿಸ್ ಕ್ಯಾಪಿಟಲ್' ಅಂದಾಜಿಸಿದೆ.
5ಜಿ ನೆಟ್ವರ್ಕ್‌ಗಾಗಿ ಕಂಪನಿಗಳು ಹೆಚ್ಚು ಹೂಡಿಕೆ ಮಾಡಿದ್ದು, ಲಾಭ ಹೆಚ್ಚಿಸಿಕೊಳ್ಳಲು ಶುಲ್ಕವನ್ನು ಹೆಚ್ಚು ಮಾಡಲಿವೆ. ಇದರಿಂದ ಬಳಕೆದಾರರ ಮೊಬೈಲ್ ಬಿಲ್ ನಗರ ಪ್ರದೇಶದಲ್ಲಿ ಶೇ.3.2ರಿಂದ ಶೇ. 3.6ವರೆಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶೇ. 5.2ರಿಂದ 5.9ರಷ್ಟು ಏರಬಹುದು ಎಂದು ಸಂಸ್ಥೆಯು ಅಂದಾಜಿಸಿದೆ. ದರ ಹೆಚ್ಚಳವಾದರೆ, ಇತ್ತೀಚಿನ ವರ್ಷಗಳಲ್ಲಿ 4ನೇ ಬಾರಿ ಮೊಬೈಲ್ ಬಿಲ್ ತುಟ್ಟಿಯಾದಂತಾಗಲಿದೆ.