-->
ಮಂಗಳೂರು:‌ ನಡುರಸ್ತೆಯಲ್ಲಿಯೇ ನಮಾಜ್ - ವೀಡಿಯೊ ವೈರಲ್

ಮಂಗಳೂರು:‌ ನಡುರಸ್ತೆಯಲ್ಲಿಯೇ ನಮಾಜ್ - ವೀಡಿಯೊ ವೈರಲ್


ಮಂಗಳೂರು: ನಗರದ ಕಂಕನಾಡಿಯಲ್ಲಿ ನಡು ರಸ್ತೆಯಲ್ಲಿಯೇ ನಮಾಜ್ ನಡೆದಿದೆ ಎನ್ನಲಾದ ವೀಡಿಯೊ ಒಂದು ವೈರಲ್ ಆಗುತ್ತಿದೆ.

ಕಂಕನಾಡಿಯ ಮಸೀದಿಯ ಮುಂಭಾಗದ ರಸ್ತೆಯಲ್ಲಿ ಈ ನಮಾಜ್ ನಡೆದಿದ್ದು, 2-3  ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಆದ್ದರಿಂದ ಶುಕ್ರವಾರ ಮಧ್ಯಾಹ್ನದ ವೇಳೆ ಈ ನಮಾಜ್ ನಡೆದಿರಬಹುದು. ಮಳೆ ಬಂದು ರಸ್ತೆಯಲ್ಲಿ ನೀರು ನಿಂತು ಹಸಿಹಸಿ ಇದ್ದರೂ, ಅಲ್ಲಿಯೇ ಮ್ಯಾಟ್ ಹಾಸಿ ನಮಾಜ್ ಮಾಡುತ್ತಿರುವುದು ಕಂಡು ಬಂದಿದೆ.


ರಸ್ತೆಯಲ್ಲಿಯೇ ನಮಾಜ್ ನಡೆಯುತ್ತಿರುವುದರಿಂದ ವಾಹನಗಳು ಯೂಟರ್ನ್ ಹೊಡೆದು ಸಂಚಾರ ಮಾಡುತ್ತಿರುವುದು ವೀಡಿಯೋದಲ್ಲಿ ಕಂಡು ಬರುತ್ತಿದೆ. ನಮಾಜ್ ವೀಡಿಯೊ ಮಾಡಿ ಅಸಮಾಧಾನ ವ್ಯಕ್ತಪಡಿಸಿ ವೈರಲ್ ಮಾಡಲಾಗುತ್ತಿದೆ.



Ads on article

Advertise in articles 1

advertising articles 2

Advertise under the article