ದಿನ ಪೂರ್ತಿ ಶುಭ ಆಗಿರಲು ಏನು ಮಾಡಬೇಕು
Sunday, May 12, 2024
ಯಾವಾಗ್ಲೂ ಒಂದೇ ರೀತಿ ಇರೋದಿಲ್ಲ ಒಂದು ದಿನ ಶುಭಕರವಾಗಿರುತ್ತೆ ಆದರೆ ಕೆಲವೊಂದು ದಿನ ನೋವು, ಬೇಸರ, ಗಲಾಟೆಯಿಂದ ಇರುತ್ತದೆ . ಬೆಳಿಗ್ಗೆ ಎದ್ದ ತಕ್ಷಣ ನಾವು ಮನಸ್ಸು ಹಾಳಾಗುವಂತಹ ಕೆಲಸ ಮಾಡಿದ್ರೆ ದಿನವಿಡಿ ಕೆಟ್ಟದಾಗಿರುತ್ತದೆ. ಶುಭ ಕೆಲಸ, ದಿನವನ್ನು ಶುಭಕರವಾಗಿರಿಸುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ದೇವಸ್ಥಾನದ ಗಂಟೆ ಶಬ್ದ ಅಥವಾ ಶಂಖದ ಧ್ವನಿ ಕೇಳಿದ್ರೆ ದಿನ ಪೂರ್ತಿ ಶುಭ ಆಗಿರುತ್ತದೆ
ಬೆಳಿಗ್ಗೆ ಹಾಸಿಗೆಯಿಂದ ಕೆಳಗೆ ಕಾಲಿಡುವ ಮೊದಲು ಎರಡೂ ಕೈಗಳ ರೇಖೆಯನ್ನು ನೋಡಿ ಮಂತ್ರ ಜಪಿಸಬೇಕು. ಹೀಗೆ ಮಾಡಿದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಹಾಸಿಗೆಯಿಂದ ಎದ್ದ ತಕ್ಷಣ ಇಷ್ಟದ ದೇವಾನುದೇವತೆಗಳ ದರ್ಶನ ಮಾಡಬೇಕು. ಇಷ್ಟ ದೇವರನ್ನು ನೆನೆದು ನಮಸ್ಕರಿಸಬೇಕು.
ದಿನ ಶುಭಕರವಾಗಿರಬೇಕೆನ್ನುವವರು ಬೆಳಿಗ್ಗೆ ಎದ್ದ ನಂತ್ರ ಸೂರ್ಯ ದರ್ಶನ ಪಡೆದು, ನಮಸ್ಕರಿಸಬೇಕು.
ಬೆಳ್ಳಂಬೆಳಿಗ್ಗೆ ಮನೆಯಿಂದ ಹೊರ ಹೋಗುವ ವೇಳೆ ಗೋವು ನಿಮ್ಮ ಕಣ್ಣಿಗೆ ಬಿದ್ದರೆ ಆ ದಿನ ಶುಭಕರವಾಗಿರುತ್ತದೆ.