ಯಾವ ಸಮಯದಲ್ಲಿ ಹಣ್ಣನ್ನು ಸೇವಿಸುವುದು ಒಳ್ಳೆಯದು
ದಿನಾಲೂ ಹಣ್ಣುಗಳನ್ನು ಸೇವಿಸುವುದು ಅತಿ ಮುಖ್ಯ . ಹಣ್ಣುಗಳಿಂದ ದೇಹಕ್ಕೆ ಬೇಕಾದ ಖನಿಜ, ಜೀವಸತ್ವ, ಫೈಬರ್ ಮತ್ತು ಆಂಟಿ ಅಕ್ಸಿಡೆಂಟ್ ಗಳು ಹಣ್ಣುಗಳಲ್ಲಿ ಇರುತ್ತದೆ ಆದರೆ ಯಾವ ಸಮಯದಲ್ಲಿ ಹಣ್ಣನ್ನು ಸೇವಿಸುವುದು ಒಳ್ಳೆಯದು ಎಂಬುದರ ಬಗ್ಗೆ ಇಲ್ಲಿದೆ ವಿವರ
ಅಧ್ಯಯನಗಳ ಪ್ರಕಾರ ನಿಮ್ಮ ಊಟದಲ್ಲಿ ಅರ್ಧ ಭಾಗ ತರಕಾರಿ ಮತ್ತು ಹಣ್ಣುಗಳನ್ನು ತಿನ್ನಬೇಕು
ಆದರೆ ಊಟದ ಮಧ್ಯೆ ಅಥವಾ ಊಟದ ಬಳಿಕ ಹಣ್ಣುಗಳನ್ನು ಸೇವಿಸುವುದು ಉತ್ತಮವಲ್ಲ
ಬೆಳಗ್ಗೆ ಎದ್ದಾಕ್ಷಣ ಒಂದು ಲೋಟ ನೀರು ಕುಡಿದು ಬಳಿಕ ಹಣ್ಣುಗಳನ್ನು ತಿನ್ನಬೇಕು. ಇದರಿಂದ ದೇಹ ತೂಕವೂ ಇಳಿಯುತ್ತದೆ. ದಿನವಿಡೀ ಕೆಲಸ ಮಾಡುವ ಚೈತನ್ಯವೂ ಸಿಗುತ್ತದೆ.
ಇದರ ಹೊರತಾಗಿ ಹಣ್ಣುಗಳನ್ನು ಬೆಳಗ್ಗೆ, ಮಧ್ಯಾಹ್ನ ಅಥವಾ ರಾತ್ರಿಯ ಊಟದ ಮಧ್ಯದ ಅವಧಿಯಲ್ಲಿ, ಸ್ನಾಕ್ಸ್ ರೂಪದಲ್ಲಿ ಸೇವಿಸಬಹುದು.
ಊಟಕ್ಕೆ ಹಣ್ಣು ತಿಂದರೆ ಫೈಬರ್ ಹೆಚ್ಚಿರುವ ಈ ಹಣ್ಣುಗಳು ಬೇಗ ಜೀರ್ಣವಾಗದೆ ಉಳಿದಾವು. ಅಲ್ಲದೆ ಹಣ್ಣುಗಳಲ್ಲಿ ಸಕ್ಕರೆ ಅಂಶ ಸಾಕಷ್ಟಿರುವುದರಿಂದ ರಾತ್ರಿ ಮಲಗುವ ಮುನ್ನ ಕಡ್ಡಾಯವಾಗಿ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದಲ್ಲ
ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ಆದರೆ ಯಾವ ಸಮಯದಲ್ಲಿ ತಿನ್ನಬೇಕು ಎಂದು. ತಿಳಿಯುವುದು ಉತ್ತಮ