ಒಣಗಿದ ಹೂಗಳಿಂದ ಮನೆಗೆ ದಾರಿದ್ರ್ಯ ಬರುತ್ತದೆ
Monday, May 13, 2024
ಕೋಣೆ ಸುಂದರವಾಗಿ ಕಾಣಿಸುತ್ತದೆ ದೇವರ ಹೂವುಗಳು ಮನೆಯ ಶಕ್ತಿಯನ್ನು ಬದಲಾಯಿಸುತ್ತದೆ ಒಣಗಿದ ಹೂ ಗಳಿಂದ ಮನೆಗೆ ತೊಂದರೆ ಬರುತ್ತೆ ಅಂದ್ರೆ ನಂಬಲಾಯೇ ಬೇಕು
ಒಣಗಿದ ಹೂವುಗಳನ್ನು ತೆಗೆಯದೇ ಹಾಗೇ ಬಿಟ್ಟರೆ, ಅದು ನಿಮ್ಮ ಮನೆಯ ಶಕ್ತಿಯನ್ನು ಹಾಳು ಮಾಡುತ್ತದೆ. ಹಾಗಾಗಿ ಒಣಗಿದ ಅಥವಾ ಬಾಡಿದ ಹೂವುಗಳನ್ನು ಮನೆಯಲ್ಲಿ ಇಡಬಾರದು. ದೇವರಿಗೆ ಆಗಿರಬಹುದು ಅಥವಾ ಮನೆಯಲ್ಲೇ ಆಗಿರಬಹುದು ಯಾವಾಗಲೂ ಪರಿಮಳಯಕ್ತ ಹೂವುಗಳನ್ನು ಮಾತ್ರ ಇಟ್ಟುಕೊಳ್ಳಬೇಕು.
ತಾಜಾ ಹೂವುಗಳಿಗೆ ಅದ್ಭುತವಾದ ಧನಾತ್ಮಕ ಶಕ್ತಿಯನ್ನು ಸೃಷ್ಟಿಸುವ ಸಾಮರ್ಥ್ಯವಿರುತ್ತದೆ. ಅವುಗಳಿಂದ ಉತ್ಪತ್ತಿಯಾಗುವ ಶಕ್ತಿಯು ಧನಾತ್ಮಕವಾಗಿ ನಮ್ಮ ಸುತ್ತಮುತ್ತಲಿನ ಸ್ಥಳವನ್ನು ಬದಲಾಯಿಸುತ್ತದೆ. ತಾಜಾ ಹೂವುಗಳು ಇರುವಲ್ಲೆಲ್ಲಾ ತಮ್ಮ ಸುತ್ತಲಿನ ಜೀವಿಗಳನ್ನು ಸಕಾರಾತ್ಮಕವಾಗಿರಿಸುತ್ತದೆ. ಅದೇ ಹೂವುಗಳು ಒಣಗಲು ಪ್ರಾರಂಭವಾದಾಕ್ಷಣ ಅದರಿಂದ ನಕಾರಾತ್ಮಕ ಕಂಪನಗಳು ಹರಡಲು ಪ್ರಾರಂಭವಾಗುತ್ತದೆ.
ಅದಕ್ಕಾಗಿಯೇ ಹೂವುಗಳನ್ನು ಒಣಗುತ್ತಿದ್ದಂತೆ ಅವುಗಳನ್ನು ತಕ್ಷಣವೇ ಅಲ್ಲಿಂದ ಬದಲಾಯಿಸಬೇಕು. ಒಂದು ವೇಳೆ ಒಣಗಿದ ಹೂವುಗಳು ಇದ್ದರೆ ಅದು ಆರೋಗ್ಯದ ಮೇಲೆಯೂ ಮತ್ತಷ್ಟು ಕೆಟ್ಟ ಪರಿಣಾಮ ಬೀಳುತ್ತದೆ