ಸರಣಿ ಬ್ಲ್ಯಾಕ್ ಡೇ... ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡಿದ ಸರ್ಕಾರ!
Friday, May 31, 2024
ಸರಣಿ ಬ್ಲ್ಯಾಕ್ ಡೇ... ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡಿದ ಸರ್ಕಾರ!
ಲೋಕ ಸಭಾ ಮತಎಣಿಕೆ ವಿಧಾನಪರಿಷತ್ ಚುನಾವಣೆಯ ಅಂಗವಾಗಿ ಈ ಜೂನ್ ತಿಂಗಳ ಮೊದಲ ವಾರ ಎಣ್ಣೆ ಸಿಗೋದು ಅನುಮಾನವಿದೆ ಈ ಕಾರಣದಿಂದ ಹಾಗೂ ರೆಸ್ಟೋರೆಂಟ್ ಉದ್ಯಮಗಳ ಮಾಲೀಕರು, ಕಾನೂನು ಸಡಿಲಿಸುವಂತೆ ಆಗ್ರಹಿಸಿದ್ದಾರೆ.
ಒಂದು ವಾರಕ್ಕೆ ಅಬಕಾರಿ ಸುಂಕವಾಗಿ ಸರ್ಕಾರಕ್ಕೆ 100 ಕೋಟಿ ರೂಪಾಯಿ ಅಧಿಕ ಮೊತ್ತ ನಷ್ಟವಾಗಲಿದೆ. ರೆಸ್ಟೋರೆಂಟ್ ಉದ್ಯಮಕ್ಕೆ ಬಹಳ ನಷ್ಟ ಆಗುವ ಸಾದ್ಯತೆ ಉಂಟು
ರಾಜ್ಯದಲ್ಲಿ ಐದು ದಿನಗಳ ಕಾಲ ಮದ್ಯ ಮಾರಾಟ ಬಂದ್ ಮಾಡಲಾಗಿದೆ.
ಜೂನ್ 03 ರಂದು ಪರಿಷತ್ ಚುನಾವಣೆಗೆ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮತದಾನಕ್ಕೂ ಮುನ್ನ 48 ಗಂಟೆಗಳ ಕಾಲ ಅಂದರೆ ಜೂನ್ 1 ಮತ್ತು 2 ರಂದು ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.
ಇನ್ನು, ಜೂನ್ 04 ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಕಾರಣ ಜೂನ್ 3 ರ ಮಧ್ಯರಾತ್ರಿಯಿಂದ 24 ಗಂಟೆಗಳ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ
ಜೂನ್ 4 ಬಳಿಕ ಅಂದರೆ ಜೂನ್ 06 ರಂದು ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದೆ. ಹಾಗಾಗೀ ಮದ್ಯದ ಅಂಗಡಿಗಳು ಬಂದ್ ಆಗಲಿದೆ.
ಈ ಹಿನ್ನೆಲೆಯಲ್ಲಿ ನಿಗದಿತ ದಿನಗಳಲ್ಲಿ ಉತ್ಪಾದನೆ, ಮದ್ಯದ ಮಾರಾಟ, ವಿತರಣೆ, ಸಾಗಣೆ ಮತ್ತು ಸಂಗ್ರಹಣೆಗೆ ನಿಷೇಧ ಅನ್ವಯವಾಗಲಿದೆ.