ಉರಿ ಮೂತ್ರ ಸಮಸ್ಯೆ ನಿರ್ಮೂಲಕ್ಕೆ ಸುಲಭ ಮಾರ್ಗ ಯಾವುದು
ಉರಿ ಮೂತ್ರದ ಸಮಸ್ಯೆಯನ್ನು ಸಾಮಾನ್ಯವಾಗಿ ಎಲ್ಲರೂ ಒಮ್ಮೆಯಾದರೂ ಅನುಭವಿಸಿ ಇರುತ್ತರೆ ಆದರೆ ಉರಿ ಮೂತ್ರದ ಸಮಸ್ಯೆಯನ್ನು ತಡೆಯಲು ಇರುವ ಮನೆಮದ್ದು ಯಾವುದೂ ಎಂಬುದು ಯಾರಿಗೂ ತಿಳಿದಿರುವುದ್ದಿಲ್ಲ .
ಉರಿ ಮೂತ್ರ ತಡೆಯುವ ಮನೆಮದ್ದು ಇಲ್ಲಿದೆ ತಿಳಿಯಿರಿ
ಉರಿ ಮೂತ್ರದ ಸಮಸ್ಯೆ ಯಿಂದ ಉಂಟಾಗುವ ತೊಂದರೆಗಳು ಯಾವುವು :
ದೇಹದಲ್ಲಿ ನೀರು ಕಡಿಮೆಯಾದಾಗ ಅಥವಾ ಏನಾದರೂ ಸೋಂಕು ಆದಾಗ ಮೂತ್ರ ಉರಿ ಸಮಸ್ಯೆ ಕಂಡು ಬರುತ್ತದೆ. ನಿತ್ಯ ಮೂತ್ರ ಉರಿ ಸಮಸ್ಯೆ ಬರುತ್ತಿದ್ದರೆ ಗರ್ಭಕೋಶ ತೊಂದರೆ, ಕಿಡ್ನಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಸಮಸ್ಯೆಯಿಂದ ಹೊರ ಬರಬೇಕಾದರೆ ಪ್ರತಿನಿತ್ಯ ದಾಳಿಂಬೆ ಜ್ಯೂಸ್ ಕುಡಿಯಬೇಕು.
ದಾಳಿಂಬೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಉರಿಮೂತ್ರ ಸಮಸ್ಯೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಇನ್ನು ದಾಳಿಂಬೆ ಜ್ಯೂಸ್ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ.
* ದಾಳಿಂಬೆಯಲ್ಲಿ ವಿಟಮಿನ್ ಸಿ ಇದ್ದು, ಮೂತ್ರ ಉರಿ ಕಡಿಮೆ ಮಾಡಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.
ಮೂತ್ರ ಉರಿ ಕಡಿಮೆ ಮಾಡುವ ಇತರ ಆಹಾರಗಳೆಂದರೆ ಕ್ಯಾನ್ ಬೆರ್ರಿ ಜ್ಯೂಸ್, ವಿಟಮಿನ್ ಸಿ ಹೆಚ್ಚಿರುವ ಕಿತ್ತಳೆ, ದ್ರಾಕ್ಷಿ, ಕಿವಿ ಹಣ್ಣು.
ಮೂತ್ರ ಉರಿ ಕಂಡು ಬಂದರೆ ಸಾಕಷ್ಟು ನೀರು ಕುಡಿಯಬೇಕು. ನೀರು ಜಾಸ್ತಿ ಕುಡಿಯುವುದರಿಂದ ದೇಹದಲ್ಲಿರುವ ಮೂತ್ರ ಸೋಂಕಿಗೆ ಕಾರಣವಾದ ಬ್ಯಾಕ್ಟಿರಿಯಾವನ್ನು ಹೊರ ಹಾಕಿ ಕಿಡ್ನಿಯನ್ನು ಸಂರಕ್ಷಿಸಬಹುದು.