-->
ನೀರು ಕುಡಿಯುವುದ್ದರಿಂದ ಸಿಗುವ ಆರೋಗ್ಯ ಪ್ರಯೋಜನವೇನು

ನೀರು ಕುಡಿಯುವುದ್ದರಿಂದ ಸಿಗುವ ಆರೋಗ್ಯ ಪ್ರಯೋಜನವೇನು


ದಿನ ಬೆಳಗ್ಗೆ ಎದ್ದು ಕೂಡಲೇ ಏನು ತಿನ್ನದೇ  ನೀರು ಕುಡಿಯುವ ಅಭ್ಯಾಸ ಆರೋಗ್ಯವಾಗಿ ಇರಿಸಿಕೊಳ್ಳಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೆಳಿಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ದೇಹದ ನೈಸರ್ಗಿಕ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಸಾಧ್ಯವಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
* ನೀವು ಕುಡಿಯುವ ನೀರಿನಿಂದ ಚಯಾಪಚಯ ಕ್ರಿಯೆಯು ವೇಗ ಪಡೆದುಕೊಳ್ಳುತ್ತದೆ. ಇದು ದೇಹವು ಪೋಷಕಾಂಶಗಳನ್ನು ಹೆಚ್ಚೆಚ್ಚು ಸ್ವೀಕರಿಸಲು ಸಹಾಯ ಮಾಡುತ್ತದೆ.
ಬೆಳಗ್ಗೆ ಎದ್ದ ಕೂಡಲೇ ಸಾಕಷ್ಟು ನೀರು ಕುಡಿದರೆ, ದೇಹದ ಶಕ್ತಿಯ ಮಟ್ಟವು ಸುಧಾರಿಸುತ್ತದೆ ಹಾಗೂ ದಿನವಿಡೀ ಚೈತನ್ಯದಿಂದ ಕೂಡಿರಲು ಇದು ಸಹಾಯ ಮಾಡುತ್ತದೆ.
* ಬೇಸಿಗೆಯ ಸಮಯದಲ್ಲಿ ಬೆಳಗಿನ ಜಾವ ನೀರು ಕುಡಿಯುವುದರಿಂದ ದೇಹದಲ್ಲಿ ತೇವಾಂಶ ಸಂಗ್ರಹವಾಗುತ್ತದೆ ಹಾಗೂ ರಾತ್ರಿಯಿಡೀ ನೀವು ನೀರು ಕುಡಿಯದೇ ಹಾಗೆಯೇ ಮಲಗಿದ್ದ ಅಂತರವನ್ನು ಕಡಿಮೆ ಮಾಡುತ್ತದೆ.
* ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹ ಮತ್ತು ಮೆದುಳಿಗೆ ಆಮ್ಲಜನಕದ ಪೂರೈಕೆ ಸುಧಾರಿಸುತ್ತದೆ. ಇದರಿಂದ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. 
ಬೆಳಗ್ಗೆ ಎಷ್ಟು ಲೋಟ ನೀರು ಕುಡಿಯಬೇಕು..?
ಬೆಳಗ್ಗೆ ಎದ್ದ ಕೂಡಲೇ ಮೊದಲನೆಯದಾಗಿ ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಬ್ರಶ್ ಮಾಡಿ. ಬೆಡ್ ಟೀ ಸೇವಿಸುವ ಅಭ್ಯಾಸ ನಿಮಗಿದ್ದರೆ ಅದಕ್ಕೂ ಮೊದಲು ನೀರು ಕುಡಿಯುವುದನ್ನು ನೀವು ರೂಢಿಸಿಕೊಳ್ಳಬೇಕು. ಬೆಳಗ್ಗೆ ಎದ್ದ ಬಳಿಕ ನೀವು ಕನಿಷ್ಠ ಮೂರರಿಂದ ನಾಲ್ಕು ಗ್ಲಾಸ್ ನೀರು ಕುಡಿಯಬೇಕು. ಒಂದೇ ಬಾರಿಗೆ ಇಷ್ಟು ನೀರು ಕುಡಿಯಲು ಸಾಧ್ಯವಿಲ್ಲವಾದರೆ ಕ್ರಮೇಣವಾಗಿ ಈ ಪ್ರಮಾಣ ಹೆಚ್ಚಿಸುತ್ತಾ ಹೋಗಿ. ಬೆಳಗ್ಗಿನ ಜಾವ ಉಗುರುಬೆಚ್ಚಗಿನ ಅಥವಾ ಬಿಸಿ ನೀರನ್ನು ಕುಡಿಯುವ ಅಭ್ಯಾಸ ನಿಮಗಿದ್ದರೆ ಈ ಅಭ್ಯಾಸವನ್ನು ಎಂದಿಗೂ ನಿಲ್ಲಿಸಬೇಡಿ.ಬಿಸಿ ನೀರು ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ನೀರು ಕುಡಿದ ಅರ್ಧ ಗಂಟೆ ಬಳಿಕ ನೀವು ಉಪಹಾರ ಸೇವನೆ ಮಾಡಬಹುದಾಗಿದೆ.

Ads on article

Advertise in articles 1

advertising articles 2

Advertise under the article