ಪ್ರಜ್ಬಲ್ PENDRIVE ಪ್ರಕರಣ- ಶಿವರಾಮೇಗೌಡ ಬಿಚ್ಚಿಟ್ಟ ಸತ್ಯ
ಬೆಂಗಳೂರು: ಹಾಸನದ ಪೆನ್‌ಡ್ರೈವ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ದೇವರಾಜೇಗೌಡ ಅವರ ಮೈಯೆಲ್ಲಾ ಕ್ಯಾಮೆರಾ ಇದ್ದು, ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು.
"ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ದುಂಬಾಲು ಬಿದ್ದಿದ್ದ ದೇವರಾಜೇಗೌಡ ಕೊನೆಗೆ ನನ್ನ ಹೆಸರನ್ನೇ ಬಳಸಿಕೊಂಡಿದ್ದಾರೆ. ಮೊದಲು ಫೋನ್‌ನಲ್ಲಿ ದೇವರಾಜೇಗೌಡ ಜತೆಗೆ ಮಾತನಾಡಿದ್ದೆ. ಆಗ ಭೇಟಿಯಾಗಲು ಬಯಸಿದರು. ಅದರಂತೆ ಖಾಸಗಿ ಹೋಟೆಲ್‌ಗೆ ಬರುವಂತೆ ಹೇಳಿದೆ. ಅವರನ್ನು ಮೊದಲ ಬಾರಿಗೆ ಏ.29ರಂದು ಭೇಟಿಯಾಗಿದ್ದೆ"
" ಆ ಸಂದರ್ಭದಲ್ಲಿ ಶಿವಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ಪದೆಪದೇ ಕೋರಿದ್ದರು. ನಾನು ಶಿವಕುಮಾರ್ ಅವರಿಗೆ ಕರೆ ಮಾಡಿದೆ. ಹೊರಗೆ ಇದ್ದ ಅವರು ರಾತ್ರಿ ಬೆಂಗಳೂರಿಗೆ ಮರಳುವುದಾಗಿ ತಿಳಿಸಿದರು.'' ಎಂದು ವಿವರಿಸಿದರು.
"ರಾತ್ರಿ ಶಿವಕುಮಾರ್ ಅವರನ್ನು ಭೇಟಿಯಾಗಿ ದೇವರಾಜೇಗೌಡ ತಮ್ಮನ್ನು ನೋಡಲು ಬಯಸುತ್ತಿದ್ದಾರೆಂದು ತಿಳಿಸಿದೆ. ಬಳಿಕ ನನ್ನ ಮೊಬೈಲ್‌ನಿಂದಲೇ ದೇವರಾಜೇಗೌಡಗೆ ಕರೆ ಮಾಡಿ ಮಾತನಾಡಿದರು. ಈ ವೇಳೆ ನನ್ನ ಬಳಿ ಹಲವು ದಾಖಲೆಗಳಿವೆ ಎಂಬುದಾಗಿ ದೇವರಾಜೇಗೌಡ ಹೇಳಿದ್ದರು. ಅದಕ್ಕೆ ಶಿವಕುಮಾರ್, ನಿನ್ನ ಬಳಿ ಇರುವುದನ್ನೆಲ್ಲಾ ಎಸ್ ಐಟಿಗೆ ಕೊಡು ಎಂದಷ್ಟೇ ಹೇಳಿದ್ದರು. ಯಾವುದೇ ಹುದ್ದೆ ಸ್ಥಾನಮಾನದ ಆಫರ್ ನೀಡಲಿಲ್ಲ,'' ಎಂದು ಮಾಹಿತಿ ನೀಡಿದರು.
'ಆ ಫೋನ್ ಸಂಭಾಷಣೆ ತರುವಾಯ ದೇವರಾಜೇಗೌಡ ನನ್ನ
ಬಳಿ ಬಂದರು. ಅವರ ನಡವಳಿಕೆ ಗಮನಿಸಿದಾಗ ಹಣ ಗಳಿಸುವ ಉದ್ದೇಶವಿರುವಂತಿದ್ದುದು ಗೊತ್ತಾಯಿತು,'' ಎಂದರು.