ಪುತ್ತೂರು: ಮದುವೆ ಸಮಾರಂಭದಲ್ಲಿ ಕದ್ದುಮುಚ್ಚಿ ಯುವತಿಯರ ಫೋಟೊ ಕ್ಲಿಕ್ಕಿಸುತ್ತಿದ್ದ ಯುವಕರಿಬ್ಬರಿಗೆ ಬಿತ್ತು ಧರ್ಮದೇಟು
Thursday, May 9, 2024
ಪುತ್ತೂರು: ಆಮಂತ್ರಣ ಪತ್ರವಿಲ್ಲದೇ ಮದುವೆ ಸಮಾರಂಭಕ್ಕೆ ಬಂದಿದ್ದ ಯುವಕರಿಬ್ಬರು ಕದ್ದುಮುಚ್ಚಿ ಸಿಕ್ಕ ಸಿಕ್ಕ ಯುವತಿಯರ ಫೋಟೋ ಕ್ಲಿಕ್ಕಿಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು, ಧರ್ಮದೇಟು ತಿಂದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ಕಾವು ದೇವಸ್ಥಾನದ ಸಭಾಭವನದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಅಪರಿಚಿತ ಯುವಕರಿಬ್ಬರು ಬಂದು ಯುವತಿಯರ ಫೋಟೋ ತೆಗೆಯುತ್ತಿದ್ದರು. ಇದನ್ನು ಗಮನಿಸಿದ ಮಹಿಳೆಯೊಬ್ಬರು ಇವರ ಮೊಬೈಲ್ ಕಸಿದುಕೊಂಡಿದ್ದಾರೆ. ಪರಿಶೀಲಿಸಿದಾಗ ಗ್ಯಾಲರಿಯಲ್ಲಿ ನೂರಾರು ಹುಡುಗಿಯರ ಪೋಟೋ ಇರುವುದು ಬೆಳಕಿಗೆ ಬಂದಿದೆ.
ಈ ಕುರಿತು ನೆರೆದಿದ್ದವರು ಆಕ್ರೋಶಗೊಂಡು ಧರ್ಮದೇಟು ನೀಡಿ ವಿಚಾರಣೆ ನಡೆಸಿದ್ದಾರೆ. ಏಟು ತಿಂದವರು ತೆಗೆದ ಫೋಟೊಗಳನ್ನು ಡಿಲೀಟ್ ಮಾಡಿ ತಪ್ಪೊಪ್ಪಿಕೊಂಡು ಮದುವೆ ಮನೆಯಿಂದ ಕಾಲ್ಕಿತ್ತಿದ್ದಾರೆ.