ಪುತ್ತೂರು: ಬಿಂದು ನೀರಿನ ಫ್ಯಾಕ್ಟರಿಯಲ್ಲಿ ಬೋರ್ ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ
Tuesday, May 28, 2024
ಪುತ್ತೂರು: ಇಲ್ಲಿನ ಪ್ರತಿಷ್ಠಿತ ಬಿಂದು ನೀರಿನ ಫ್ಯಾಕ್ಟರಿಯಲ್ಲಿ ಬೋರ್ ವೆಲ್ ಕೊರೆಯುತ್ತಿದ್ದ ಲಾರಿಯ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿರುವ ಘಟನೆಯೊಂದು ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ.
ರಾಜ್ಯದ ಪ್ರಸಿದ್ಧ ಬಿಂದು ನೀರಿನ ಫ್ಯಾಕ್ಟರಿಯವರು ತಮ್ಮ ಫ್ಯಾಕ್ಟರಿಗೆ ಸೇರಿದಂತಹ ಬೋರ್ ವೆಲ್ ಗಳನ್ನು ಫ್ಲಶ್ ಮಾಡುತ್ತಿದ್ದರು. ಆದರೆ ಅನ್ಯಕೋಮಿನ ಸಂಘಟನೆಗೆ ಸೇರಿದ ಗುಂಪೊಂದು ಬೋರ್ ವೆಲ್ ಗಳನ್ನು ಫ್ಲಶ್ ಮಾಡುವ ಬದಲು ಹೊಸ ಬೋರ್ ವೆಲ್ ಕೊರೆಯಲಾಗುತ್ತಿದೆ ಎಂದು ಆರೋಪಿಸಿ ಕಲ್ಲು ತೂರಾಟ ನಡೆಸಿದೆ. ಈ ವೇಳೆ ಸಣ್ಣಪುಟ್ಟ ಮಕ್ಕಳು ಕೂಡ ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದರು. ಬಳಿಕ ಎರಡೂ ಕಡೆಗಳಿಂದ ಪರಸ್ಪರ ಕಲ್ಲು ತೂರಾಟ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದರ ವೀಡಿಯೋ ಈಗ ವೈರಲ್ ಆಗುತ್ತಿದೆ. ಈ ಬಗ್ಗೆ ಎರಡೂ ಗುಂಪುಗಳಿಂದಲೂ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.