-->
ಉಡುಪಿ: ಯುವಕನಿಗೆ ಲೈಂಗಿಕ ದೌರ್ಜನ್ಯ - ವಾಸ್ತುತಜ್ಞ ಅರೆಸ್ಟ್

ಉಡುಪಿ: ಯುವಕನಿಗೆ ಲೈಂಗಿಕ ದೌರ್ಜನ್ಯ - ವಾಸ್ತುತಜ್ಞ ಅರೆಸ್ಟ್

ಉಡುಪಿ: ಯುವಕನೋರ್ವನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ವಾಸ್ತುತಜ್ಞನನ್ನು ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ ಸಮೀಪದ ಮಟಪಾಡಿ ನಿವಾಸಿ ಅನಂತ ನಾಯ್ಕ(51) ಬಂಧಿತ ಆರೋಪಿ. 

ಅನಂತ ನಾಯ್ಕ ಬ್ರಹ್ಮಾವರ ಬಸ್‌ ನಿಲ್ದಾಣ ಬಳಿಯ ಲಾಡ್ಜೊಂದರ ಕೋಣೆಯಲ್ಲಿ ವಾಸ್ತುತಜ್ಞ, ಜಲತಜ್ಞ, ಯೋಗ ಪಂಡಿತ, ಆಧ್ಯಾತ್ಮಿಕ ಪಂಡಿತ ಎಂಬುದಾಗಿ ಬೋರ್ಡ್ ಹಾಕಿಕೊಂಡು ವ್ಯವಹಾರ ನಡೆಸುತ್ತಿದ್ದ.

ಈತನ ಲಾಡ್ಜ್‌ ಕೊಠಡಿಗೆ ರಾತ್ರಿ 9ಗಂಟೆಗೆ 18 ವರ್ಷದ ಯುವಕ ತನ್ನ ತಂದೆಯೊಂದಿಗೆ ವಾಸ್ತು ಕೇಳಲು  ಬಂದಿದ್ದ. ಈ ಸಂದರ್ಭ ತಂದೆಯನ್ನು ಹೊರಗೆ ಕಳುಹಿಸಿದ ಅನಂತ ನಾಯ್ಕ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರಲಾಗಿದೆ. ಅದರಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಅಸ್ವಾಭಾವಿಕ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಆರೋಪಿ ಅನಂತ ನಾಯ್ಕನನ್ನು ಗುರುವಾರ ಬೆಳಗ್ಗೆ ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

Related Posts

Ads on article

Advertise in articles 1

advertising articles 2

Advertise under the article