NEET EXAM :ಆಕಾಶ್ ಉಡುಪಿ ಶಾಖೆಯ 2 ವಿದ್ಯಾರ್ಥಿಗಳು ಟಾಪ್ ಸ್ಕೋರರ್
Wednesday, June 5, 2024
ಉಡುಪಿ : ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ ((AESL) ಸಂಸ್ಥೆಯ ಉಡುಪಿ ಶಾಖೆಯ 2 ವಿದ್ಯಾರ್ಥಿಗಳು ಪ್ರತಿಷ್ಠಿತ ನೀಟ್ (NEET UG 2024) ಪರೀಕ್ಷೆಯಲ್ಲಿ 705 ಹಾಗೂ ಹೆಚ್ಚಿನ ಅಂಕಗಳನ್ನು ಗಳಿಸಿ, ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಈ ಗಮನಾರ್ಹ ಸಾಧನೆಯು ಅವರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು AESL ಒದಗಿಸಿದ ಉತ್ಕೃಷ್ಟ-ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)) ಫಲಿತಾಂಶ ಪ್ರಕಟಿಸಿದೆ.
ಪ್ರಜ್ಞಾನ್ ಪಿ .ಶೆಟ್ಟಿ 715 ಅಂಕಗಳೊಂದಿಗೆ AIR 94 (ಅಖಿಲ ಭಾರತ ಶ್ರೇಯಾಂಕ) ಹಾಗೂ ವೈಭವಿ ಆಚಾರ್ಯ 705 ಅಂಕಗಳೊಂದಿಗೆ AIR 1,138 ಗಳಿಸಿದರು.
ವಿಷಯಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಶಿಸ್ತಿನ ಅಧ್ಯಯನ ವೇಳಾಪಟ್ಟಿಯನ್ನು ಪಾಲಿಸಿರುವುದು ತಮ್ಮ ಯಶಸ್ಸಿಗೆ ಕಾರಣವೆಂದು ಸಾಧಕ ವಿದ್ಯಾರ್ಥಿಗಳು ಬಣ್ಣಿಸಿದ್ದಾರೆ.
"ಈ ಎರಡೂ ವಿಷಯಗಳಲ್ಲಿ ಆಕಾಶ್ ಸಂಸ್ಥೆಯು ಮಾಡಿರುವ ಸಹಾಯಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಆದರೆ, AESL ನೀಡಿರುಪ್ರಕ ತರಬೇತಿ ಅಲ್ಲದಿದ್ದರೆ ಈ ಅಲ್ಪಾವಧಿಯಲ್ಲಿ ನಾವು ವಿವಿಧ ವಿಷಯಗಳಲ್ಲಿ ಅನೇಕ ಪರಿಕಲ್ಪನೆಗಳನ್ನು ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ" ಎಂದು ವಿದ್ಯಾರ್ಥಿಗಳು ಅಭಿಪ್ರಾಯಿಸಿದ್ದಾರೆ.
ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL) ಸಂಸ್ಥೆಯ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥ ಧೀರಜ್ ಕುಮಾರ್ ಮಿಶ್ರಾ, "ವಿದ್ಯಾರ್ಥಿಗಳನ್ನು ಅವರ ಅನುಕರಣೀಯ ಸಾಧನೆಗಾಗಿ ನಾವು ಅಭಿನಂದಿಸುತ್ತೇವೆ. ದೇಶದೆಲ್ಲೆಡೆಯ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು NEET 2024 ಪರೀಕ್ಷೆಗೆ ಹಾಜರಾಗಿದ್ದಾರೆ.ನಮ್ಮ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮಾಡುವ ಎಲ್ಲ ಪ್ರಯತ್ನಗಳಿಗೆ ನಾವು ಶುಭ ಹಾರೈಸುತ್ತೇವೆ ಎಂದರು.
ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವೈದ್ಯಕೀಯ (MBBS), ದಂತ ವೈದ್ಯಕೀಯ (BDS) ಮತ್ತು ಆಯುಷ್ - AYUSH (BAMS, BUMS, BHMS, ಇತ್ಯಾದಿ) ಪದವಿಗಳಿಗೆ ಪ್ರವೇಶ ಪಡೆಯಲು ಹಾಗೂ ವಿದೇಶದಲ್ಲಿ ಪ್ರಾಥಮಿಕ ವೈದ್ಯಕೀಯ ಅರ್ಹತೆಯನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರತಿ ವರ್ಷವೂ ಅರ್ಹತಾ ಪರೀಕ್ಷೆಯಾಗಿ NEET ಅನ್ನು ನಡೆಸುತ್ತದೆ ಎಂದು ತಿಳಿಸಿದ್ದಾರೆ.
- ಮಂಗಳೂರಿನ ಸಹಾಯಕ ನಿರ್ದೇಶಕ ಶ್ಯಾಮ್ ಪ್ರಸಾದ ಎಂ., ಉಡುಪಿ ಕಛೇರಿಯ ಮುಖ್ಯಸ್ಥರಾದ ಪರಮೇಶ್ವರ ಬೀರಾ ಇದ್ದರು.