Mangalore: ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ: 5 ದೊಡ್ಡ ,20 ಸಣ್ಣ ಹಣ್ಣುಹಂಪಲು ಅಂಗಡಿಗಳು ಭಸ್ಮ, ಕೋಟ್ಯಂತರ ನಷ್ಟ- video
ಮಂಗಳೂರು
: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಬಳಿಯಿರುವ ಗ್ಲೋಬಲ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಢ ಸಂಭವಿಸಿ 5 ದೊಡ್ಡ ಹಾಗೂ 20 ಸಣ್ಣ ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿ , ವ್ಯಾಪಾರಸ್ಥರಿಗೆ ಕೋಟ್ಯಂತರ ರೂ ನಷ್ಟ ಉಂಟಾಗಿದೆ.
ಕಲ್ಲಾಪು
ಗ್ಲೋಬಲ್ ಮಾರುಕಟ್ಟೆಯಲ್ಲಿನ ನವೀದ್ ಮಾಲೀಕತ್ವದ ಎಸ್.ಎನ್ ಫ್ರೂಟ್ಸ್ ನಷ್ಟ
(1 ಕೋಟಿ ರೂ) , ಸುಹೈಲ್ ಎಂಬವರಿಗೆ ಸೇರಿದ ಕೆಎಫ್ ಕೆ (40 ಲಕ್ಷ),
ಲತೀಫ್ ಎಂಬವರ ಕೆ.ಕೆ.ಫ್ರೂಟ್ಸ್
(70 ಲಕ್ಷ), ಇಂಡಿಯನ್ (60 ),ಸಲಾಂ ಅವರ ಬಿ.ಎಸ್.ಆರ್
(15 ರಿಂದ 20 ಲಕ್ಷ), ಝುಲ್ಫೀಕರ್ ಅವರ ಪಿಕೆಎಸ್ (15-20), ನಾಸೀರ್
ಎಂಬವರ ಕೆಜಿಎನ್ ಫ್ರೂಟ್ಸ್ (15-20)
ನಷ್ಟ ಅಂದಾಜಿಸಲಾಗಿದೆ. ಅದರ
ಹತ್ತಿರದಲ್ಲಿರುವ ಸಣ್ಣ ಅಂಗಡಿಗಳಾದ ಗಣೇಶ್ ಮಾರ್ಕೆಟ್, ಇಮ್ತಿಯಾಝ್, ಅಮೀರ್ ಸೇರಿದಂತೆ ಒಟ್ಟು 20 ಅಂಗಡಿಗಳು ಸುಟ್ಟುಹೋಗಿವೆ.
ಎಸ್
ಎನ್ ಫ್ರೂಟ್ಸ್ ಮಾಲೀಕರು ಭಾನುವಾರ ಸಂಜೆ ವೇಳೆಯಷ್ಟೇ ರೂ. 40 ಲಕ್ಷದ ಹಣ್ಣುಹಂಪಲುಗಳನ್ನು ಮಾರಾಟಕ್ಕೆ ತರಿಸಿದ್ದರು. ಎಲ್ಲಾ ಮಳಿಗೆಗಳಲ್ಲಿ ಫ್ರೀಝರ್ ಗಳಿದ್ದೂ, ಅವುಗಳು ಸುಟ್ಟುಹೋಗಿವೆ. ರಾತ್ರಿ 2.30 ರ ಸುಮಾರಿಗೆ ಬೀಗ
ಹಾಕಿದ್ದ ಅಂಗಡಿಗಳ ಒಳಗಿನಿಂದ ಬೆಂಕಿ ಕಾಣಿಸಿಕೊಂಡಿದ್ದು ಒಮ್ಮಿಂದೊಮ್ಮೆಲೇ 25 ಅಂಗಡಿಗಳಿಗೇ ವ್ಯಾಪಿಸಿದೆ. ಮಂಗಳೂರಿನಿಂದ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಕೈಗೊಂಡ ಹಿನ್ನೆಲೆಯಲ್ಲಿ ಉಳಿದ 60 ಅಂಗಡಿಗಳಿಗೆ ಬೆಂಕಿ ಹರಡಿಲ್ಲ.
Mangalore Kallapu Global Market Fire : Live Video pic.twitter.com/BYQU0d4gWp
— kannada alert (@Kannadaalert) June 10, 2024