ಕೃಷಿಯೇ ಸಂಸ್ಕೃತಿಯ ಮೂಲ: ಆಳ್ವಾಸ್ ಹಲಸು ಮೇಳ ಉದ್ಘಾಟಿಸಿ ಮಾಜಿ ಸಂಸದ ನಳಿನ್
Sunday, June 16, 2024
ಕೃಷಿಯೇ ಸಂಸ್ಕೃತಿಯ ಮೂಲ: ಆಳ್ವಾಸ್ ಹಲಸು ಮೇಳ ಉದ್ಘಾಟಿಸಿ ಮಾಜಿ ಸಂಸದ ನಳಿನ್
ಭಾರತೀಯ ಸಂಸ್ಕೃತಿಯ ಮೂಲವೇ ಕೃಷಿ. ಕೃಷಿಯನ್ನು ಪ್ರೋತ್ಸಾಹಿಸುವ ಮೂಲಕ ನೆಲದ ಸಂಸ್ಕೃತಿಯನ್ನು ಪೋಷಿಸುವ ಕೆಲಸವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ನಡೆಸುತ್ತಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಮೂಡಬಿದಿರೆಯ ವಿದ್ಯಗಿರಿಯಲ್ಲಿ ಹಲಸು ಮೇಳ ಮತ್ತು ಸಮೃದ್ಧಿ ಹಣ್ಣು ಆಹಾರೋತ್ಸವ ಮತ್ತು ಕೃಷಿ ಪರಿಕರ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮದು ಕೃಷಿ ಮತ್ತು ಋಷಿ ಸಂಸ್ಕೃತಿಯ ದೇಶ. ಇವೆರಡೂ ತ್ಯಾಗ ಮತ್ತು ಆರಾಧನಾ ಸಂಸ್ಕೃತಿ. ಕೃಷಿ ಇಲ್ಲದೆ ಸಂಸ್ಕೃತಿ ಇಲ್ಲ ಎಂದು ಅವರು ಹೇಳಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಶ್ರೀಪತಿ ಭಟ್, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಅರಣ್ಯ ಸಂರಕ್ಷಣಾಧಿಕಾರಿ ಎನ್. ಸತೀಶ್, ಹಿರಿಯ ವಿಜ್ಞಾನಿ ಬಿ. ಧನಂಜಯ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.