ಮಂಗಳೂರು: ಯುವತಿ ಸೊಂಟಕ್ಕೆ ಕೈಹಾಕಿ ಕಿರುಕುಳ ಆರೋಪ - ಕಾಮುಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು
Saturday, June 8, 2024
ಮಂಗಳೂರು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಚುಡಾಯಿಸಿದಲ್ಲದೆ, ಆಕೆಯ ಸೊಂಟಕ್ಕೆ ಕೈಹಾಕಿ ಕಿರುಕುಳ ನೀಡಿರುವ ಕಾಮುಕನಿಗೆ ಸರಿಯಾಗಿ ತಪರಾಕಿ ನೀಡಿ ಸಾರ್ವಜನಿಕರೇ ಪಾಂಡೇಶ್ವರ ಪೊಲೀಸರಿಗೊಪ್ಪಿಸಿದ್ದಾರೆ.
ಬಜ್ಪೆ ನಿವಾಸಿ ಕಲಂದರ್ ಶಾಫಿ(31) ಬಂಧಿತ ಕಾಮುಕ.
ನಾಗುರಿಯ ಎಸ್.ಕೆ.ಗ್ರೂಪ್ ಕಂಪೆನಿಯಲ್ಲಿ ಪ್ರಾಡಕ್ಟ್ ಸೇಲ್ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಬೆಳಗ್ಗೆ 9ಗಂಟೆ ಸುಮಾರಿಗೆ ಬಸ್‌ನಲ್ಲಿ ಸ್ಟೇಟ್‌ಬ್ಯಾಂಕ್ ನಿಂದ ಬಜ್ಪೆ ಕಡೆಗೆ ಹೋಗುವ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ಬಸ್ ನಲ್ಲಿ ಕಲಂದರ್ ಶಾಫಿ ಹಿಂಬಾಲಿಸಿಕೊಂಡು ಬಂದು ಆಕೆ ಕುಳಿತಿದ್ದ ಹಿಂಬದಿ ಸೀಟಿನಲ್ಲಿ ಕುಳಿತು ಯುವತಿಯ ಸೊಂಟಕ್ಕೆ ಕೈಹಾಕಿ ಕಿರುಕುಳ ನೀಡಿದ್ದಾನೆ. ಇದರಿಂದ ಬೆಚ್ಚಿಬಿದ್ದ ಯುವತಿ ಕಿರುಚಾಡಿದ್ದಾಳೆ. ಈ ವೇಳೆ ಸಾರ್ವಜನಿಕರು ಆತನಿಗೆ ಸರಿಯಾಗಿ ತಪರಾಕಿ ನೀಡಿದ್ದಾರೆ.
ಆಗ ಆತ ಬಳ್ಳಾಲ್ ಬಾಗ್ ನಲ್ಲಿ ಬಸ್ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಸಾರ್ವಜನಿಕರೇ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಯುವತಿ ನೀಡಿರುವ ದೂರಿನಂತೆ ಪಾಂಡೆಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಗೆ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆಂದು ಆರೋಪಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ.