ದರ್ಶನ್ ಆ್ಯಂಡ್ ಗ್ಯಾಂಗ್ ಮರ್ಡರ್ ಪ್ರಕರಣ: ಬಂಧಿತ ಆರೋಪಿ ತಂದೆ ಹೃದಯಾಘಾತದಿಂದ ಸಾವು
Saturday, June 15, 2024
ಚಿತ್ರದುರ್ಗ: ಇಲ್ಲಿನ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಶುಕ್ರವಾರ ಬಂಧನಕ್ಕೀಡಾದ ದರ್ಶನ್ ಗ್ಯಾಂಗ್‌ನ ಆರೋಪಿ ಅನುಕುಮಾರ್ ಎಂಬಾತನ ತಂದೆ ಚಂದ್ರಣ್ಣ (60) ಪುತ್ರ ಅರೆಸ್ಟ್ ಆಗಿರುವ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚಿತ್ರದುರ್ಗದ ಸಿಹಿನೀರು ಹೊಂಡ ಬಳಿಯಿರುವ ಮನೆ ನಿವಾಸಿ ಅನುಕುಮಾರ್ ಅಲಿಯಾಸ್ ಅನಿಲ್ ಶುಕ್ರವಾರ ಪೊಲೀಸರಿಗೆ ಶರಣಾಗಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಆತನ ತಂದೆ ಚಂದ್ರಣ್ಣನಿಗೆ ದೊಡ್ಡ ಆಘಾತವೇ ಆಗಿದೆ. ಇಂತಹ ಹೀನ ಕೃತ್ಯದಲ್ಲಿ ಪುತ್ರನೂ ಭಾಗಿಯಾಗಿದ್ದಾನೆ ಎಂದು ಚಂದ್ರಣ್ಣ ಮಾನಸಿಕವಾಗಿ ನೊಂದಿದ್ದರು. ಪರಿಣಾಮ ಸಂಜೆ ವೇಳೆ ಪ್ರಜ್ಞೆತಪ್ಪಿ ಬಿದ್ದ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸದ್ಯ 6ನೇ ಮತ್ತು 7ನೇ ಆರೋಪಿಯಾಗಿರುವ ಜಗದೀಶ್ ಹಾಗೂ ಅನುಕುಮಾರ್ ಅಲಿಯಾಸ್ ಅನಿಲ್ ಎಂಬ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿ, ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಅನುಕುಮಾರ್ ತಂದೆ ಚಂದ್ರಪ್ಪ ಗಾರೆ ಕೆಲಸ ಮಾಡಿಕೊಂಡಿದ್ದರು. ಪುತ್ರನ ಸ್ಥಿತಿ ನೆನೆದು ಮನೆಯಿಂದ ಆಚೆ ಬಂದ ಚಂದ್ರಪ್ಪ ಕುಸಿದು ಬಿದ್ದಿದ್ದಾರೆ. ತಕ್ಷಣ ಅನು ಕಾರ್ ಸ್ನೇಹಿತರು ಚಂದ್ರಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಲೋ ಬಿಪಿ ಆಗಿದೆ. ಹೃದಯಾಘಾತದಿಂದ ಚಂದ್ರಪ್ಪ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.