ಕಾಸರಗೋಡು: ಮಂಜೇಶ್ವರದ ಆರೋಗ್ಯಾಧಿಕಾರಿ ಮೃತದೇಹ ಶೌಚಾಲಯದಲ್ಲಿ ಪತ್ತೆ
Wednesday, June 19, 2024
ಕಾಸರಗೋಡು: ನಗರದ ಮಂಜೇಶ್ವರದ ಕುಟುಂಬ ಕಲಾ ಕೇಂದ್ರದ ಆರೋಗ್ಯಾಧಿಕಾರಿಯೊಬ್ಬರು ತಾವು ವಾಸ್ತವ್ಯವಿದ್ದ ವಸತಿಗೃಹದ ಶೌಚಾಲಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ
ಪತ್ತನಂತ್ತಿಟ್ಟ ನಿವಾಸಿ ಮನೋಜ್ (45) ಮೃತಪಟ್ಟ ಆರೋಗ್ಯಾಧಿಕಾರಿ.
ಮನೋಜ್ ಮಂಜೇಶ್ವರ ಬ್ಲಾಕ್ ಪಂಚಾಯತ್‌ನ ಕುಟುಂಬ ಕಲಾ ಕೇಂದ್ರದ ಆರೋಗ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮಂಜೇಶ್ವರ ಎಸ್‌ಐಟಿ ಶಾಲಾ ಸಮೀಪದ ವಸತಿಗೃಹದಲ್ಲಿ ವಾಸವಾಗಿದ್ದರು. ಈ ಪರಿಸರದ ಸುತ್ತಮುತ್ತ ದುರ್ವಾಸನೆ ಹಬ್ಬಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಮನೆಗೆ ಬಂದು ಕೋಡಿದಾಗ ಮನೋಜ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಮನೆಯಲ್ಲಿ ಅವರು ಒಬ್ವರೇ ವಾಸ್ತವ್ಯವಿದ್ದರು ಎಂದು ತಿಳಿದುಬಂದಿದೆ.
ಎರಡು ದಿನಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಅವರು ಮಂಜೇಶ್ವರದಲ್ಲಿ ಅರೋಗ್ಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.