-->
1000938341
ಭವಿಷ್ಯಕ್ಕಾಗಿ ಒಂದು ಗಿಡ: ಸಹ್ಯಾದ್ರಿಯಲ್ಲಿ ಒಂದು ವಿಶಿಷ್ಟ ಬೀಳ್ಕೊಡುಗೆ

ಭವಿಷ್ಯಕ್ಕಾಗಿ ಒಂದು ಗಿಡ: ಸಹ್ಯಾದ್ರಿಯಲ್ಲಿ ಒಂದು ವಿಶಿಷ್ಟ ಬೀಳ್ಕೊಡುಗೆ

ಭವಿಷ್ಯಕ್ಕಾಗಿ ಒಂದು ಗಿಡ: ಸಹ್ಯಾದ್ರಿಯಲ್ಲಿ ಒಂದು ವಿಶಿಷ್ಟ ಬೀಳ್ಕೊಡುಗೆ





ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜಿ ಎಂಬಿಎ ತಂಡವನ್ನು ಸಹ್ಯಾದ್ರಿ ಕಿರಿಯ ಎಂಬಿಎ ವಿದ್ಯಾರ್ಥಿಗಳು ವಿಶಿಷ್ಟವಾಗಿ ಬೀಳ್ಕೊಟ್ಟರು.


ಭವಿಷ್ಯಕ್ಕಾಗಿ ಒಂದು ಗಿಡ ಎಂಬ ಧ್ಯೇಯ ವಾಕ್ಯದೊಂದಿಗೆ ಹಿರಿಯ ಕಿರಿಯ ವಿದ್ಯಾರ್ಥಿಗಳು ವ್ಯಕ್ತಿಗೊಂದು ಗಿಡ ಎಂಬಂತೆ ವಿವಿಧ ಬೀಜಗಳನ್ನು ಬಿತ್ತು ಮುಖಾಂತರ ಮುಂದಿನ ಪೀಳಿಗೆಗಾಗಿ ಒಂದು ಗಿಡವನ್ನು ನೆಡುವ ಕಾರ್ಯಕ್ರಮವನ್ನು ನೆರವೇರಿಸಿದರು.


ಈ ಮೂಲಕ, ಬೀಳ್ಕೊಡುಗೆ ಕೇವಲ ಡ್ಯಾನ್ಸ್, ಹಾಡುಗಳಿಗೆ ಸೀಮಿತವಾಗದೆ ಪರಿಸರ ಪ್ರೇಮದ ಒಂದು ಹಿತಾನುಭವಕ್ಕೆ ವೇದಿಕೆಯಾಯಿತು.


ಈ ವಿಶಿಷ್ಟ ಕಾರ್ಯಕ್ರಮದಲ್ಲಿ 300 ವಿವಿಧ ಬೀಜಗಳನ್ನು ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ಜೊತೆ ಸೇರಿ ಬಿತ್ತುವ ಈ ಕಾರ್ಯಕ್ರಮವನ್ನು ನಾದರ್ನ್‌ಸ್ಕೈ ಪ್ರಾಪರ್ಟಿಸ್ ಪ್ರೈ. ಲಿ. ನಿರ್ದೇಶಕಿ ಶ್ರೀಮತಿ ಕೃತಿನ್ ಅಮೀನ್ ಅವರು ಬೀಜ ಬಿತ್ತು ಮುಖಾಂತರ ಉದ್ಘಾಟಿಸಿದರು.


ಡಾ. ವಿಶಾಲ್ ಸಮರ್ಥ, ಪ್ರೊ. ಪದ್ಮನಾಭ, ಡೀನ್ ಪ್ರೊ. ರಮೇಶ್ ಕೆ.ಜಿ. ಹಾಗೂ ಇತರ ಉಪನ್ಯಾಸಕ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.



Ads on article

Advertise in articles 1

advertising articles 2

Advertise under the article