ಎರಡು ವರ್ಷದ ಹೆಣ್ಣು ಮಗುವಿನ ಮೇಲೆ ದಾಳಿ ನಡೆಸಿ ಕಚ್ಚಿಕೊಂದ ಬೀದಿ ನಾಯಿಗಳು
Tuesday, June 25, 2024
ಖರ್ಗೋನ್ (ಮಧ್ಯಪ್ರದೇಶ): ಕಟ್ಟಡ ನಿರ್ಮಾಣದ ಸ್ಥಳದ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಕಚ್ಚಿ ಕೊಂದಿರುವ ಘಟನೆ ಸೋಮವಾರ ರಾತ್ರಿ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಮಂಗ್ರೂಲ್ ರಸ್ತೆಯಲ್ಲಿ ನಡೆದಿದೆ.
ಖರ್ಗೋನ್ ಜಿಲ್ಲೆಯ ಉಪ್ಪಿ ಗ್ರಾಮದ ನಿವಾಸಿ ಬಾಲಕಿಯ ತಂದೆಯು ನಿರ್ಮಾಣ ಕಾಮಗಾರಿ ಜಾಗದಲ್ಲಿ ತನ್ನ ಕುಟುಂಬದ ಸದಸ್ಯರೊಂದಿಗೆ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಸೋಮವಾರ ರಾತ್ರಿ ಬಾಲಕಿಯ ತಂದೆ ಅಡುಗೆ ಮಾಡುತ್ತಿದ್ದರೆ, ತಾಯಿಯು ಸ್ನಾನ ಮಾಡುತ್ತಿದ್ದರು.
ಈ ವೇಳೆ ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದೆ. ದಾಳಿ ನಡೆಸಿರುವ ಬೀದಿ ನಾಯಿಗಳು, ಮಗುವನ್ನು 100-150 ಮೀ ದೂರ ಎಳೆದೊಯ್ದಿದೆ. ಪರಿಣಾಮ ಆಕೆ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು ಎಂದು ಹೇಳಲಾಗಿದೆ. ತಕ್ಷಣ ಬಾಲಕಿಯ ಪೋಷಕರು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಕೆ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.