ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಪುನರಾಯ್ಕೆ
ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಪುನರಾಯ್ಕೆ
ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ ಬಣ)ದ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಅವರು ಪುನರಾಯ್ಕೆಗೊಂಡಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಅವರು ಮನೋಹರ ಶೆಟ್ಟಿ ಅವರ ನೇಮಕಾತಿಯನ್ನು ಅಖೈರುಗೊಳಿಸಿದ್ದು, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಅವರ ಶಿಫಾರಸ್ಸಿನಂತೆ ಈ ನೇಮಕಾತಿ ನಡೆದಿದೆ.
ಕಳೆದೆರಡು ದಶಕಗಳಿಂದ ಜಿಲ್ಲೆಯ ರೈತ ಚಳವಳಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸಿರುವ ಮನೋಹರ ಶೆಟ್ಟಿ ನಡಿಕಂಬಳಗುತ್ತು ಶೋಷಣೆಗೊಳಗಾದ ರೈತರ ಪರ ಸದಾ ಧ್ವನಿ ಎತ್ತಿದ್ದಾರೆ.
400 ಕಿ. ವಾ. ವಿದ್ಯುತ್ ಲೈನ್ ಅಳವಡಿಕೆ, ರೈತರ ಜಮೀನಿನ ಅಕ್ರಮ ಭೂ ಸ್ವಾದೀನ ಮೊದಲಾದ ವಿಷಯಗಳಲ್ಲಿ ರೈತರ ಪರ ಧ್ವನಿ ಎತ್ತಿ ಜಿಲ್ಲಾಡಳಿತದ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ.
ರಾಜ್ಯ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಅವರ ನೇಮಕಗೊಂಡಿರುವುದಕ್ಕೆ ಜಿಲ್ಲೆಯ ವಿವಿಧ ರೈತ ನಾಯಕರು ಸಂತಸ ವ್ಯಕ್ತಪಡಿಸಿದ್ಧಾರೆ.