MANGALORE- ಜುವೆಲರಿ ಅಂಗಡಿಯಲ್ಲಿ ಕಳವು ಪ್ರಕರಣ -ಅಪ್ರಾಪ್ತ ಬಾಲಕಿಯಿಂದ ಚಿನ್ನಾಭರಣ ವಶ
Sunday, June 9, 2024
ಮಂಗಳೂರು: ಕುಲಶೇಖರದ ಜುವೆಲರಿ ಅಂಗಡಿಯೊಂದರಿಂದ ಮೇ 25ರಂದು ಕಳವಾಗಿದ್ದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾನೂನು ಸಂಘರ್ಷಕ್ಕೊಳಗಾದ (ಅಪ್ರಾಪ್ತ ವಯಸ್ಸಿನ ಬಾಲಕಿ) ಬಾಲಕಿಯಿಂದ ಒಟ್ಟು 59 ಗ್ರಾಂ ತೂಕದ 3.50 ಲ. ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಶನಿವಾರ ಬಾಲಕಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಅವರ ಮಾರ್ಗದರ್ಶನದಂತೆ ಡಿಸಿಪಿಗಳಾದ ಸಿದ್ದಾರ್ಥ ಗೋಯೆಲ್ ಮತ್ತು ಬಿ.ಪಿ. ದಿನೇಶ್ ಕುಮಾರ್ ಅವರ ನಿರ್ದೆಶನದಂತೆ ಎಸಿಪಿ ಪ್ರತಾಪ್ ಸಿಂಗ್ ತೋರಟ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಸೋಮಶೇಖರ್ ಜೆ.ಸಿ., ಪಿಎಸ್‌ಐಗಳಾದ ಮಂಜೇಶ್ವರ ಚಂದಾವರ್, ಪದ್ಮ ದೇವಳ್ಳಿ ಮತ್ತು ಸಿಬಂದಿ ಪಾಲ್ಗೊಂಡಿದ್ದರು.