ಆಳ್ವಾಸ್‌ನ 181 ವಿದ್ಯಾರ್ಥಿಗಳಿಗೆ ನೀಟ್‌ನಲ್ಲಿ 600ಕ್ಕೂ ಅಧಿಕ ಅಂಕ
Friday, June 7, 2024
ಆಳ್ವಾಸ್‌ನ 181 ವಿದ್ಯಾರ್ಥಿಗಳಿಗೆ ನೀಟ್‌ನಲ್ಲಿ 600ಕ್ಕೂ ಅಧಿಕ ಅಂಕ
ಮೂಡಬಿದಿರೆಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಯ ನ 181 ವಿದ್ಯಾರ್ಥಿಗಳು ನೀಟ್‌ನಲ್ಲಿ 600ಕ್ಕೂ ಅಧಿಕ ಅಂಕ ಗಳಿಸಿದ್ದು, ದೇಶವೇ ಮೆಚ್ಚುವಂತಹ ಮಹೋನ್ನತ ಸಾಧನೆ ಮಾಡಿದೆ.
ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪಿ.ಯು. ಕಾಲೇಜಿನ 181 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಈ ಮಾಹಿತಿ ನೀಡಿದರು.
181 ವಿದ್ಯಾರ್ಥಿಗಳ ಪೈಕಿ 11 ಮಂದಿ 70 ಅಂಕಗಳನ್ನು ಗಳಿಸಿದ್ದಾರೆ. 371 ವಿದ್ಯಾರ್ಥಿಗಳು 650ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ.
ಅಂಗವಿಕಲರ ವಿಭಾಗದಲ್ಲೂ 15 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.