ಮಹಾದೇವ ಶಿವನ ಕೃಪೆಗೆ ಪಾತ್ರರಾಗಲು ಯಾವ ಎಣ್ಣೆ ಬಳಸಬೇಕು
Saturday, June 8, 2024
ದೇವರಿಗೇ ದೀಪ ಹಚ್ಚಿ ದಿನದ ಆರಂಭ ಹಾಗೂ ದೀಪವನ್ನು ಹಚ್ಚಿ ದಿನದ ಅಂತ್ಯ ಮಾಡುವುದು ನಮ್ಮ ಹಿಂದೂ ಧರ್ಮದ ಸಂಪ್ರದಾಯ ಅದರಲ್ಲೂ ತುಪ್ಪ ಹಾಗೂ ವಿವಿಧ ಎಣ್ಣೆ ಗಳಿಂದ ದೀಪವನ್ನು ಹಚ್ಚಿ ದೇವರ ಕೃಪೆಗೆ ಪಾತ್ರರಾಗುತ್ತೇವೆ
ಶಿವನಿಗೆ ಹಿಪ್ಪೆ ಎಣ್ಣೆಯನ್ನು ಬಳಸಿ ದೀಪ ಹಚ್ಚಿ ಪೂಜಿಸಿದರೆ ಮಹದೇವನು ಸಂತುಷ್ಟನಾಗುತ್ತಾನೆ ಎಂದೂ ಹೇಳಲಾಗುತ್ತದೆ ಶಿವನಿಗೆ ಹಿಪ್ಪೆ ಎಣ್ಣೆ ಎಂದರೆ ಬಹಳ ಇಷ್ಟ, ಆದ್ದರಿಂದ ಆ ಎಣ್ಣೆಯಿಂದ ದೀಪ ಹಚ್ಚಿದರೆ ಶಿವನ ಕೃಪೆಗೆ ಪಾತ್ರರಾಗಲಿದ್ದೀರಿ
ವಾಸ್ತು ಪ್ರಕಾರ ಹಿಪ್ಪೆ ಎಣ್ಣೆ ಯೊಂದಿಗೆ 8 ಬತ್ತಿಗಳನ್ನು ಬಳಸಿ ಶಿವನಿಗೆ ದೀಪ ಹಚ್ಚಿದ್ದಾರೆ ಮನೆಯಲ್ಲಿ ಆರೋಗ್ಯ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ
ವಾಸ್ತುಶಾಸ್ತ್ರದ ಪ್ರಕಾರ ಹಿಪ್ಪೆ ಎಣ್ಣೆಯಿಂದ ದೀಪ ಹಚ್ಚಿ ಶಿವನನ್ನು ಪ್ರಾರ್ಥಿಸಿದರೆ ಮನದ ಆಸೆಗಳು ನೆರವೇರುತ್ತದೆ