ಗಡ್ಡದ ಆರೈಕೆ ಮಾಡೋದು ಹೇಗೆ ಇಲ್ಲಿದೆ ನೋಡಿ
Sunday, June 16, 2024
ಗಡ್ಡ ಎಂಬುದು ಈಗ ಪ್ಯಾಸನ್ ಆಗಿ ಬಿಟ್ಟಿದೆ ಎಲ್ಲ ಸೆಲೆಬ್ರಿಟಿಗಳನ್ನು ಅನುಕರಿಸಿ
ಜನಸಾಮಾನ್ಯರು ಗಡ್ಡ ಬಿಡುತ್ತಿದ್ದಾರೆ ಅದು ಗಡ್ಡ ಕಿರಿಕಿರಿ ಮಾಡೋದುಂಟು.
ಕೆಲವರಿಗೆ ಗಡ್ಡದಲ್ಲಿ ತುರಿಕೆ ಶುರುವಾಗಬಹುದು.
ಸ್ವಚ್ಛತೆಯ ಕೊರತೆ, ಒಣಚರ್ಮ, ಮೊಡವೆಗಳು ಇವೆಲ್ಲವೂ ಗಡ್ಡ ತುರಿಕೆಗೆ ಕಾರಣ. ಈ ರೀತಿ ಆಗದಂತೆ ತಡೆಯಲು ಸರಳವಾದ ಸೂತ್ರಗಳನ್ನು ಅನುಸರಿಸಿ.
ಮೊದಲನೆಯದಾಗಿ ಸ್ವಚ್ಛತೆಗೆ ಆದ್ಯತೆ ಕೊಡಿ. ಪ್ರತಿದಿನ ಸ್ನಾನ ಮಾಡಿ. ನಿಧಾನವಾಗಿ ಹೆಚ್ಚು ಉಜ್ಜದೇ ಮುಖವನ್ನು ತೊಳೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಕೇವಲ ಸ್ನಾನ ಮಾಡಿ, ಮುಖ ತೊಳೆದರೆ ಸಾಲದು.
ನಿಮ್ಮ ಗಡ್ಡಕ್ಕೂ ಆರೈಕೆಯ ಅಗತ್ಯವಿದೆ. ಒಳ್ಳೆಯ ತೈಲದಿಂದ ಆಗಾಗ ಗಡ್ಡಕ್ಕೆ ಮಸಾಜ್ ಮಾಡುತ್ತಿದ್ದರೆ, ಚೆನ್ನಾಗಿ ಬೆಳೆಯುತ್ತದೆ. ನಿಮಗೇನಾದ್ರೂ ಗಡ್ಡ ಬೆಳೆಸುವ ಇಚ್ಛೆಯಿದ್ದರೆ ಆಗಾಗ ಟ್ರಿಮ್ ಅಥವಾ ಶೇವ್ ಮಾಡಬೇಡಿ. ನಿರಾತಂಕವಾಗಿ ಅದನ್ನು ಬೆಳೆಯಲು ಬಿಡಿ.
ಹೀಗೆ ಮಾಡುವುದರಿಂದಲೂ ತುರಿಕೆಯಂತಹ ಸಮಸ್ಯೆ ಬರುವುದಿಲ್ಲ. ಬಹುಮುಖ್ಯವಾಗಿ ರಾಸಾಯನಿಕಗಳುಳ್ಳ ಫೇಸ್ ವಾಶ್, ಫೋಮ್, ಜೆಲ್ ಗಳಿಂದ ದೂರವಿರಿ. ಇವನ್ನು ಬಳಸಿದರೆ ತುರಿಕೆಯ ಸಮಸ್ಯೆ ಹೆಚ್ಚಾಗಬಹುದು. ಇಷ್ಟೆಲ್ಲಾ ಆರೈಕೆಯ ಬಳಿಕವೂ ತುರಿಕೆ ಕಡಿಮೆಯಾಗದೇ ಇದ್ದಲ್ಲಿ ತಜ್ಞರನ್ನು ಕಾಣುವುದು ಒಳಿತು.