ಲಕ್ಷ್ಮೀ ದೇವಿ ಕೊಳಕು ಬಟ್ಟೆ ಧರಿಸಿದ್ರೆ ಯಾಕೆ ಹತ್ತಿರ ಬರೋದಿಲ್ಲ
ಗರುಡ ಪುರಾಣದಲ್ಲಿ ಉಲ್ಲೇಖಿಸಿದ ಯಶಸ್ಸಿನ ಮಂತ್ರ ಯಾವುದು . ಕೈಗೆ ಬಂದ ತುತ್ತು ಬಾಯಿಗೆ ಬರೋದಿಲ್ಲ ಅಂತಹ ಸಂದರ್ಭದಲ್ಲಿ ಗರುಡ ಪುರಾಣದಲ್ಲಿ ಹೇಳಿದ ಕೆಲವೊಂದು ಟಿಪ್ಸ್ ಅಳವಡಿಸಿಕೊಂಡಲ್ಲಿ ಅದೃಷ್ಟ ಬರುತ್ತದೆ
ಎಂದೂ ಕೊಳಕಾದ ಬಟ್ಟೆಯನ್ನು ಧರಿಸಬಾರದು. ಕೊಳಕು ಬಟ್ಟೆ ಧರಿಸಿದವರ ಬಳಿ ಎಂದೂ ಲಕ್ಷ್ಮಿ ಬರುವುದಿಲ್ಲ. ಒಂದು ವೇಳೆ ಲಕ್ಷ್ಮಿ ಒಲಿದ್ರೂ ಬಹಳ ಕಾಲ ನೆಲೆ ನಿಲ್ಲುವುದಿಲ್ಲ.
ಮನುಷ್ಯನ ಅಸಫಲತೆಗೆ ಪದೇ ಪದೇ ಅನಾರೋಗ್ಯಕ್ಕೊಳಗಾಗುವುದು ಒಂದು ಕಾರಣವಾಗುತ್ತದೆ. ಅನಾರೋಗ್ಯಕ್ಕೆ ಮೂಲ ಕಾರಣ ಕೆಟ್ಟ ಆಹಾರ ಪದ್ಧತಿ ಹಾಗಾಗಿ ಸಂತುಲಿತ ಆಹಾರ ಸೇವನೆ ಮಾಡಿದಲ್ಲಿ ಆರೋಗ್ಯ ವೃದ್ಧಿಯಾಗುವ ಜೊತೆಗೆ ಸಫಲತೆ ನಿಮ್ಮದಾಗುತ್ತದೆ.
ಕೆಲವೊಂದು ಶಾಸ್ತ್ರಗಳ ಪಾಲನೆ ಕೂಡ ಸಫಲತೆಗೆ ದಾರಿ ಮಾಡಿಕೊಡುತ್ತದೆ
ದೇವರ ಪೂಜೆ- ಪುನಸ್ಕಾರವನ್ನು ವಿಧಿ-ವಿಧಾನದ ಮೂಲಕ ಮಾಡಿದಲ್ಲಿ ಮಾತ್ರ ಯಶಸ್ಸು ಲಭಿಸುತ್ತದೆ.
ಜ್ಞಾನ ವೃದ್ಧಿಗೆ ಅಭ್ಯಾಸ ಬಹಳ ಮುಖ್ಯ. ಹಳೆಯ ಜ್ಞಾನ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಹೊಸ ಹೊಸ ವಿಷಯಗಳ ಕಲಿಕೆ ಜ್ಞಾನ ವೃದ್ಧಿಸುವ ಜೊತೆಗೆ ಯಶಸ್ಸನ್ನು ತಂದು ಕೊಡುತ್ತದೆ.