ಚೇಳು ಕಚ್ಚಿದ್ದಾರೆ ಏನು ಮಾಡಬೇಕು
Sunday, June 2, 2024
ಚೇಳು ತುಂಬಾ ವಿಷಕಾರಿ ಆದರೆ ಚೇಳು ಕಚ್ಚಿದ ತಕ್ಷಣ ಸಾಯುವುದಿಲ್ಲ ಆದರೆ ನಿರ್ಲಕ್ಷಿವುದು ಸೂಕ್ತವಲ್ಲ ಹಾಗಾಗಿ
ಚೇಳು ಕಚ್ಚಿದ ತಕ್ಷಣ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಔಷಧಿ ಮಾಡಿ ಪರಿಹಾರ ಕಂಡುಕೊಳ್ಳಬಹು
ಚೇಳು ಕಚ್ಚಿದ ತಕ್ಷಣ ಕಚ್ಚಿದ ಜಾಗದಿಂದ 4 ರಿಂದ 5 ಇಂಚು ಮೇಲ್ಬಾಗದಲ್ಲಿ ಬಟ್ಟೆಯನ್ನು ಬಿಗಿಯಾಗಿ ಕಟ್ಟಬೇಕು. ರಕ್ತದ ಮೂಲಕ ವಿಷ ದೇಹದ ಇತರ ಭಾಗ ಸೇರದಂತೆ ಮಾಡಲು ಬಟ್ಟೆ ಕಟ್ಟಬೇಕು. ಪಿನ್ ಅಥವಾ ಸ್ವಚ್ಛವಾದ ಚಿಮಿಟಿಗೆಯನ್ನು ಬಿಸಿ ಮಾಡಿ ಕಚ್ಚಿದ ಜಾಗದಲ್ಲಿರುವ ವಿಷವನ್ನು ನಿಧಾನವಾಗಿ ತೆಗೆಯಬೇಕು. ಇದಾದ ನಂತ್ರ ಈ ಕೆಳಗಿನ ಯಾವುದೇ ಒಂದು ವಿಧಾನವನ್ನು ಅನುಸರಿಸಬಹುದು.
ಕಲ್ಲುಪ್ಪನ್ನು ಈರುಳ್ಳಿ ಜೊತೆ ಬೆರೆಸಿ ರುಬ್ಬಿಕೊಳ್ಳಿ. ಇದನ್ನು ಚೇಳು ಕಚ್ಚಿದ ಜಾಗಕ್ಕೆ ಹಚ್ಚಿ. ಕೆಲವೇ ಸಮಯದಲ್ಲಿ ಚೇಳಿನ ವಿಷ ಬಿಟ್ಟುಕೊಳ್ಳುತ್ತದೆ.
ಪುದೀನಾ ಸ್ವಲ್ಪ ರಸವನ್ನು ಕಚ್ಚಿದ ಜಾಗಕ್ಕೆ ಹಚ್ಚಿ. ಉಳಿದ ರಸಕ್ಕೆ ನೀರು ಬೆರೆಸಿ ಚೇಳು ಕಚ್ಚಿದ ವ್ಯಕ್ತಿಗೆ ಕುಡಿಯಲು ನೀಡಿ.