-->
ಮಾವಿನ ಹಣ್ಣನ್ನು ಹೇಗೆ ತಿಂದರೆ ಉತ್ತಮ

ಮಾವಿನ ಹಣ್ಣನ್ನು ಹೇಗೆ ತಿಂದರೆ ಉತ್ತಮ



ಮಾವಿನ ಹಣ್ಣು ಎಲ್ಲರಿಗೂ ಪ್ರೀಯವಾದದ್ದು  ಅದರಲ್ಲೂ ಮಾವಿನ ಹಣ್ಣಿನ ಸೀಸನ್ ನಲ್ಲಿ ಲೆಕ್ಕವಿಲ್ಲದಷ್ಟು 
ಮಾವಿನ ಹಣ್ಣಿಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಮಾವಿನ ಹಣ್ಣುನ್ನು ಮಿತಿ ಮೀರಿ ತಿನ್ನುವಂತೆ ಇಲ್ಲ ಅತಿ ಹೆಚ್ಚು ಮಾವಿನ ಹಣ್ಣನ್ನು ತಿಂದರೆ ಅರೋಗ್ಯದ ಸಮಸ್ಯೆ ಬರುತ್ತದೆ 
ಆದರೆ ನಿಮ್ಮ ಈ ಮಾವಿನ ಪ್ರೀತಿ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸುವುದು ಹಾಗೂ ತೂಕ ಏರಿಕೆಗೆ ಕಾರಣವಾಗುತ್ತದೆ.
. ನೀವು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮಾವಿನ ಹಣ್ಣನ್ನು ಸೇವಿಸುತ್ತಲೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯೇ ಸರಿ. 
ಮಾವಿನಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು, ಜೀವಸತ್ವಗಳು, ಖನಿಜಗಳು ಹಾಗೂ ನಾರಿನಾಂಶಗಳು ಅಗಾಧ ಪ್ರಮಾಣದಲ್ಲಿ ಇರುತ್ತದೆ. ಆದರೆ ಅತಿಯಾದ ಮಾವಿನಹಣ್ಣಿನ ಸೇವನೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿಸಬಹುದು. ನಿಮ್ಮ ತೂಕ ನಷ್ಟದ ಪ್ರಯಾಣಕ್ಕೂ ಹಾನಿ ಮಾಡಬಹುದು.
ಅರೋಗ್ಯಮಟ್ಟವನ್ನು  ಹೆಚ್ಚಿಸಲು ಯಾವ ವಿಧಾನದಲ್ಲಿ ಮಾವು ಸೇವಿಸುವುದು ಉತ್ತಮ 
ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗದಂತೆ ತಡೆಯಲು ದಿನಕ್ಕೆ ಅರ್ಧದಿಂದ ಒಂದು ಸಣ್ಣ ಗಾತ್ರದ ಮಾವಿನ ಹಣ್ಣು ಸೇವನೆ ಮಾಡುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯ ಹೊರ ಹಾಕಿದ್ದಾರೆ. ಒಂದು ಮಧ್ಯಮ ಗಾತ್ರದ ಮಾವಿನಹಣ್ಣು ಸುಮಾರು 50 ಗ್ರಾಂ ಕಾರ್ಬೋಹೈಡೇಟ್ ಅಂಶಗಳನ್ನು ಹೊಂದಿರುತ್ತದೆ. ಹೀಗಾಗಿ ನೀವು ದಿನಕ್ಕೆ ಅರ್ಧ ಮಾವಿನ ಹಣ್ಣು ಸೇವನೆ ಮಾಡಿದರೆ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ದೇಹದಲ್ಲಿ ಕಾರ್ಬೋಹೈಡೇಟ್ ಹೆಚ್ಚು ಸಂಗ್ರಹವಾದಷ್ಟೂ ಸಕ್ಕರೆ ಪ್ರಮಾಣ ಹಾಗೂ ತೂಕದ ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ. ಆದರೆ ಅರ್ಧ ಮಾವಿನ ಹಣ್ಣಿನ ಸೇವನೆಯು ನಿಮ್ಮ ದೇಹಕ್ಕೆ ಉತ್ತಮ ಕೊಬ್ಬನ್ನು ಕೊಡುಗೆಯಾಗಿ ನೀಡುತ್ತದೆ. ಮಾವಿನ ಹಣ್ಣುಗಳನ್ನು ಸೇವನೆ ಮಾಡುವ ಆರೋಗ್ಯಕರ ಮಾರ್ಗವೆಂದರೆ ನೆನೆಸಿದ ಚಿಯಾ ಬೀಜಗಳು ಹಾಗೂ ಬಾದಾಮಿ ಮತ್ತು
ವಾಲಟ್‌ನ ಜೊತೆಯಲಿ ನೀಮ ಒಂದು ಕಪ್ ಮಾವಿನ
ವಾಲ್ನಟ್‌ನ ಜೊತೆಯಲ್ಲಿ ನೀವು ಒಂದು ಕಪ್ ಮಾವಿನ ಹಣ್ಣನ್ನು ಸೇವನೆ ಮಾಡಬಹುದು. ಏಕೆಂದರೆ ಇವುಗಳು ಮಾವಿನ ಹಣ್ಣುಗಳ ಸೇವನೆಯ ಬಳಿಕ ರಕ್ತದಲ್ಲಿ ಹೆಚ್ಚಾಗುವ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿರುತ್ತವೆ.
ಮಾವಿನ ಹಣ್ಣುಗಳ ಸೇವನೆಗೆ ಯಾವ ಸಮಯ ಸೂಕ್ತ..?
ನೀವು ಯಾವುದೇ ದೈಹಿಕ ಚಟುವಟಿಕೆಗಳನ್ನು ನಡೆಸುವ ಮೊದಲು ಮಾವಿನ ಹಣ್ಣುಗಳನ್ನು ಸೇವನೆ ಮಾಡುವುದು ಉತ್ತಮವಾಗಿರುತ್ತದೆ. ದೇಹವನ್ನು ದಂಡಿಸುವ ಮೊದಲು ಫೈಬ‌ರ್ ಹಾಗೂ ಕೊಬ್ಬಿನಂಶ ಹೊಂದಿರುವ ಆಹಾರ ಸೇವನೆ ಮಾಡಿದಾಗ ನಿಮ್ಮ ದೇಹದಲ್ಲಿ ಹೆಚ್ಚು ಶಕ್ತಿ ಇರುತ್ತದೆ. 
ಅಲ್ಲದೇ ದೇಹ ದಂಡನೆ ಮೂಲಕ ಹೆಚ್ಚುವರಿ ಕ್ಯಾಲೋರಿಗಳನ್ನು ಕಡಿತಗೊಳಿಸುವುದು ಸಹ ಸಾಧ್ಯವಿದೆ. ಹೀಗಾಗಿ ದೈಹಿಕ ಚಟುವಟಿಕೆಗಳಿಗೂ ಮುನ್ನ ನೀವು ಮಾವಿನ ಹಣ್ಣನ್ನು ಸೇವಿಸುವುದು ಉತ್ತಮವಾಗಿದೆ.

Ads on article

Advertise in articles 1

advertising articles 2

Advertise under the article