-->
1000938341
ಬೆಳ್ಳಿಗೆ ವಾಕಿಂಗ್ ಮಾಡುವ ವಾಕಿಂಗ್ ನಿಮ್ಮ ಜೀವನವನ್ನು ಬದಲಾಯಿಸುತ್ತದೆ

ಬೆಳ್ಳಿಗೆ ವಾಕಿಂಗ್ ಮಾಡುವ ವಾಕಿಂಗ್ ನಿಮ್ಮ ಜೀವನವನ್ನು ಬದಲಾಯಿಸುತ್ತದೆ


ಬೆಳಗ್ಗೆ ಬೇಗನೆ ಎದ್ದು, 15 ನಿಮಿಷ ವಾಕ್ ಹೋಗುವುದರಿಂದ  ಬದಲಾವಣೆಗಳನ್ನು ತರುತ್ತದೆ. ಬೆಳಗ್ಗೆ ವಾಕಿಂಗ್ ಮಾಡುವುದು ಒಂದು . ಅನೇಕರು ವಾಕ್ ಮಾಡುವುದಕ್ಕೆ ಅವರ ಬಳಿ ಸಮಯ ಇಲ್ಲ ಅಂತ ಹೇಳುವುದನ್ನು ನಾವೆಲ್ಲಾ ನೋಡುತ್ತಿರುತ್ತೇವೆ. ದಿನಕ್ಕೆ ಕೇವಲ 15 ನಿಮಿಷಗಳ ಕಾಲ ವಾಕ್ ಮಾಡಿದರೂ ಸಾಕಂತೆ, ಅದರಿಂದ ನಮ್ಮ ದೇಹ ಮತ್ತು ಮನಸ್ಸಿಗೆ ಆಶ್ಚರ್ಯಕರ ಪ್ರಯೋಜನಗಳನ್ನು ತರಬಹುದು.
ವಾಕಿಂಗ್ ಮಾಡುವುದ್ದರಿಂದ ಸಿಗುವ ಪ್ರಯೋಜನವೇನು:
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ:
ಪ್ರತಿದಿನ ನಡೆಯುವುದರಿಂದ ನಿಮ್ಮ ಹೃದಯದ ಆರೋಗ್ಯ ಸರಿಯಾಗಿರುತ್ತದೆ. ಒಂದು ಸಣ್ಣ ನಡಿಗೆ ಕೂಡ ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ದಿನಕ್ಕೆ ಕೇವಲ 15 ನಿಮಿಷಗಳ ಕಾಲ ನಡೆಯುವುದು ರಕ್ತ ಪರಿಚಲನೆ ಸುಧಾರಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯ ರಕ್ತನಾಳದ ಘಟನೆಗಳ ಅಪಾಯವನ್ನು ಸುಮಾರು 30% ರಷ್ಟು ಕಡಿಮೆ ಮಾಡುತ್ತದೆ.
ಉತ್ತಮ ಮನಸ್ಥಿತಿ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ:
ವಾಕಿಂಗ್ ಮಾಡುವುದು ಎಂಡಾರ್ಫಿನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ನೈಸರ್ಗಿಕ ಮೂಡ್ ಲಿಪ್ಟರ್‌ಗಳಾಗಿವೆ. ವಾಕಿಂಗ್ ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಹೇಳುತ್ತದೆ. ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತು ದಿನವಿಡೀ ಸಂತೋಷವಾಗಿರಲು ಇದು ಸರಳವಾದ ಮಾರ್ಗವಾಗಿದೆ.
ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ:
ವಾಕಿಂಗ್ ಮಾಡುವುದು ಸುಧಾರಿತ ಅರಿವಿನ ಕಾರ್ಯಕ್ಕೆ ಸಂಬಂಧ ಹೊಂದಿದೆ. ನಿಯಮಿತ ನಡಿಗೆಯು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅರಿವಿನ ಅವನತಿಯನ್ನು ತಡೆಯುತ್ತದೆ. ಕೇವಲ 15 ನಿಮಿಷಗಳ ನಡಿಗೆ ನಿಮ್ಮ ಮೆದುಳನ್ನು ಚುರುಕಾಗಿಡಲು ಮತ್ತು ಅಲ್ಟಿಮರ್ ನಂತಹ ಮರೆವಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಸ್ನಾಯುಗಳನ್ನು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ:
ವಾಕಿಂಗ್ ನಿಮ್ಮ ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನಿಯಮಿತ ವಾಕಿಂಗ್ ಮೂಳೆ ಸಾಂದ್ರತೆಯನ್ನು ಸುಧಾರಿಸುತ್ತದೆ, ಇದು ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಸ್ನಾಯುಗಳನು ಬಲಪಡಿಸಲು ಸಹಾಯ ಮಾಡುತ್ತದೆ.
ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ: ನಿಮಗೆ ಸರಿಯಾಗಿ ನಿದ್ರೆ ಬರದೇ ಹೋದರೆ, ಅದಕ್ಕೆ ಪರಿಹಾರ ವಾಕಿಂಗ್ ನೀಡುತ್ತದೆ. ವಾಕಿಂಗ್‌ನಂತಹ ನಿಯಮಿತ ದೈಹಿಕ ಚಟುವಟಿಕೆಯು ನಿಮಗೆ ವೇಗವಾಗಿ ನಿದ್ರಿಸಲು ಮತ್ತು ಆಳವಾದ ನಿದ್ರೆಯನ್ನು ಆನಂದಿಸಲು ಸಹಾಯ ಮಾಡುತ್ತದೆ. ಸಂಜೆ ಹೊತ್ತಿನಲ್ಲಿ 15 ನಿಮಿಷಗಳ ನಡಿಗೆ ನಿದ್ರಾಹೀನತೆಗೆ ನೈಸರ್ಗಿಕ ಪರಿಹಾರವಾಗಿದೆ.

Ads on article

Advertise in articles 1

advertising articles 2

Advertise under the article