ಸರ್ಕಾರಿ ಕೆಲಸ ಪಡೆಯಲು ಯಾವ ವೇವರನ್ನು ಪೂಜಿಸಬೇಕು
.
ಒಳ್ಳೆ ಕೆಲಸ ಬೇಕೆಂಬುದು ಎಲ್ಲರ ಕನಸು ಅದರಲ್ಲೂ ಸರ್ಕಾರಿ ಕೆಲಸವನ್ನು ಎಲ್ಲರೂ ಇಷ್ಟಪಡುತ್ತಾರೆ . ಆದ್ರೆ ಸರ್ಕಾರಿ ನೌಕರಿ ಎಲ್ಲರಿಗೂ ಸಿಗುವುದಿಲ್ಲ. ಒಳ್ಳೆಯ ಕೆಲಸ ಪಡೆಯ ಬೇಕು ಅಂದರೆ ಯಾವ ದೇವರ ಪೂಜೆ ಮಾಡುವುದು ಉತ್ತಮ ಎಂಬುದಾರ ಬಗ್ಗೆ ಇಲ್ಲಿದೆ ವಿವರ
ಸರ್ಕಾರಿ ಕೆಲಸ ಪಡೆಯುವ ಆಸೆ ಇರುವವರು ಪ್ರತಿ ದಿನ ಶಿವನ ಪೂಜೆ ಮಾಡಬೇಕು. ಎಲ್ಲ ಅಡೆತಡೆಗಳನ್ನು ಶಿವ ತಡೆಯುತ್ತಾನೆಂಬ ನಂಬಿಕೆಯಿದೆ ಹಾಗಾಗಿ ಪ್ರತಿ ಸೋಮವಾರ ಶಿವಲಿಂಗಕ್ಕೆ ನೀರು ಅರ್ಪಿಸಬೇಕು. ಹಾಲು ಹಾಗೂ ಅಕ್ಕಿ ಅಭಿಷೇಕವನ್ನೂ ಮಾಡಬೇಕು.
ಚತುರ್ಥಿಯ ದಿನದಂದು ಗಣೇಶನ ಮೂರ್ತಿ ಅಥವಾ ಫೋಟೋಕ್ಕೆ ಪೂಜೆ ಸಲ್ಲಿಸಬೇಕು. ಸಂದರ್ಶನಕ್ಕೆ ಹೊರಟಿದ್ದರೆ ಮನೆ ಬಿಡುವ ಮೊದಲು ಹಾಲು ಹಾಗೂ ಬೆಲ್ಲ ತಿಂದು ಹೋಗಬೇಕು.
ಪ್ರತಿ ಮಂಗಳವಾರ ಭಜರಂಗಬಲಿಗೆ ಸಿಂಧೂರವನ್ನು ಅರ್ಪಿಸಿ, ಗುಲಾಬಿ ಹೂವನ್ನು ಭಜರಂಗಬಲಿಗೆ ಅರ್ಪಿಸಿ. ಆಕಾಶದ ಮೇಲೆ ಹಾರುತ್ತಿರುವ ಹನುಮಂತನ ಫೋಟೋವನ್ನು ಪೂಜಿಸಿ. ನಿಯಮಿತವಾಗಿ ಹನುಮಾನ್ ಚಾಲಿಸನ್ನು ನಿಯಮಿತವಾಗಿ ಪಠಿಸಿ. ಜಾತಕದಲ್ಲಿ ಶನಿ ದೋಷವಿದ್ದಲ್ಲಿ ಕೆಲಸದಲ್ಲಿ ಅಡೆತಡೆಯುಂಟಾಗುತ್ತದೆ.
ಪ್ರತಿ ಶನಿವಾರ ಶನಿದೇವರ ಆರಾಧನೆ ಮಾಡಿ. ಅಲ್ಲದೆ 108 ಬಾರಿ ಶಂ ಶನೈಶ್ಚರಾಯ ನಮಃ ಮಂತ್ರವನ್ನು ಜಪಿಸುವುದು ಒಳ್ಳೆಯದು