-->
ತರಕಾರಿ ಬೆಲೆಯೇ ಗಗನಕ್ಕೆ ಏರಿಕೆ ಗ್ರಾಹಕರು ಕಂಗಾಲು

ತರಕಾರಿ ಬೆಲೆಯೇ ಗಗನಕ್ಕೆ ಏರಿಕೆ ಗ್ರಾಹಕರು ಕಂಗಾಲು


ಕಳೆದ ವರ್ಷ ದಂತೆ ಈ ವರ್ಷವೂ ಟೊಮೋಟೊ ಶತಕ ಗಡಿ ದಾಟುವ ಸಾದ್ಯತೆಯಿದ್ದೆ ಯಾಕೆಂದರೆ
ಸೇಬಿಗಿಂತ ಟೊಮೆಟೋ ದುಬಾರಿಯಾಗಿತ್ತು. ಈಗ ಮತ್ತೆ ಟೊಮೆಟೊ ಮತ್ತು ಈರುಳ್ಳಿ ಬೆಲೆ ಹೆಚ್ಚಾಗುತ್ತಿದ್ದು ಟೊಮೆಟೊ ಶತಕದ ಸನಿಹಕ್ಕೆ ಬಂದಿದೆ.
ಟೊಮೆಟೊ ಮಾತ್ರವಲ್ಲ ಎಲ್ಲ ತರಕಾರಿಗಳ ಬೆಲೆ ಗಗನಕ್ಕೇರಿ ಗ್ರಾಹಕರು ಕಂಗಾಲಾಗಿದ್ದಾರೆ. ಬಹುತೇಕ ಎಲ್ಲ ತರಕಾರಿಗಳು 50 ರೂ. ದಾಟಿವೆ. ಕೆಲವು ತರಕಾರಿಗಳ ಬೆಲೆ 100 ರೂಪಾಯಿ ದಾಟಿದೆ. ಕ್ಯಾರೆಟ್ ಬೆಲೆ ಕೆಜಿಗೆ 110 ರೂಪಾಯಿ ಇದ್ದರೆ, ಆಲೂಗಡ್ಡೆ ಬೆಲೆ 60 ರೂ. ಆಗಿದೆ. ಹೂಕೋಸು 60 ರೂ, ಬೆಂಡೆಕಾಯಿ 80 ರೂ. ಕ್ಯಾಪ್ಟಿಕಂ 80 ರೂ, ನುಗ್ಗೇಕಾಯಿ 213 ರೂ. ಮೆಣಸಿನಕಾಯಿ 140 ರೂ., ಬೀನ್ಸ್ 150 ರೂ. ಬೀಟ್‌ರೂಟ್ 65 ರೂ, ಬದನೆಕಾಯಿ 90 ರೂ., ಟೊಮೆಟೊ 85 ರೂ.ಗೆ ಮಾರಾಟವಾಗುತ್ತಿದೆ.
ಸೊಪ್ಪುಗಳ ಬೆಲೆ ಕೂಡ ಹೆಚ್ಚಾಗಿದ್ದು, ಪಾಲಕ್ ಸೊಪ್ಪು 1 ಕೆಜಿಗೆ 115 ರೂ, ಕೊತ್ತಂಬರಿ ಸೊಪ್ಪಿನ ಬೆಲೆ 300 ರೂಪಾಯಿ ಮುಟ್ಟಿದೆ. ಮೆಂತ್ಯ ಸೊಪ್ಪಿನ ಬೆಲೆ ಒಂದು ಕೆಜಿಗೆ 245 ರೂಪಾಯಿ ಆಗಿದೆ.
ಮುಂದಿನ ದಿನಗಳಲ್ಲಿ ತರಕಾರಿ ಮತ್ತು ಸೊಪ್ಪಿನ ಬೆಲೆ ಮತ್ತಷ್ಟು ಹೆಚ್ಚುವ ಭೀತಿ ಇದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಹಲವು ಕಡೆ ತರಕಾರಿಗಳನ್ನು ಬೆಳೆಯುತ್ತಿಲ್ಲ. ಈಗ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು ತರಕಾರಿ ಬೆಳೆ ಹಾಳಾಗುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ತರಕಾರಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ.
ಮಳೆಗಾಲದಲ್ಲಿ ತರಕಾರಿ ಬೆಲೆ ತುಸು ಹೆಚ್ಚಾಗುವುದು ವಾಡಿಕೆಯಾಗಿದೆ 

Ads on article

Advertise in articles 1

advertising articles 2

Advertise under the article