ಕಿವಿನೋವಿಗೆ ಮನೆಯಲ್ಲಿ ಮಾಡಿ ಪ್ರಾಥಮಿಕ ಚಿಕಿತ್ಸೆ
Sunday, June 9, 2024
ಸಣ್ಣ ಪುಟ್ಟ ಕಿವಿನೋವಿಗೆ ಮನೆಯಲ್ಲೇ ಕೆಲವು ಮದ್ದು ಮಾಡುವುದು ಉತ್ತಮ ಆದರೆ ಅತಿಯಾದ ನೋವು ಗಳಿದ್ದರೆ ಉತ್ತಮ ಡಾಕ್ಟರ್ ಅನ್ನು ಬೇಟಿ ಮಾಡಿ ಸಲಹೆ ಪಡೆಯುವುದು ಉತ್ತಮ
ಆರಂಭಿಕ ಕಿವಿನೋವು ಯಿದ್ದಾರೆ ಇಲ್ಲಿ ಇರುವ ಮನೆಮದ್ದುಗಳನ್ನು ಬಳಸಿ
ಕಿವಿ ನೋವಿಗೆ ಉಪ್ಪನ್ನು ಮದ್ದಾಗಿ ಬಳಸಬಹುದು. ಒಂದು ಕಪ್ ಉಪ್ಪನ್ನು ಬಿಸಿ ಮಾಡಿ ಬಟ್ಟೆಯ ಮೇಲೆ ಹರಡಿ. ನೋವಿರುವ ಕಿವಿಯ ಮೇಲ್ಬಾಗದಲ್ಲಿ ಉಪ್ಪಿನ ಬಟ್ಟೆಯನ್ನು ಮೃದುವಾಗಿ ಒತ್ತಿ. ಹತ್ತರಿಂದ ಹದಿನೈದು ನಿಮಿಷ ಹೀಗೆ ಮಾಡುವುದರಿಂದ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
ಪಟಾಕಿ ಅಥವಾ ಇತರ ಯಾವುದೋ ದೊಡ್ಡ ಸದ್ದಿನಿಂದಾಗಿ ನಿಮ್ಮ ಶ್ರವಣ ಶಕ್ತಿ ಕಡಿಮೆಯಾಗಿದ್ದರೆ ಈರುಳ್ಳಿಯ ಅರ್ಧ ಭಾಗ ತೆಗೆದುಕೊಂಡು ನಿಮ್ಮ ಕಿವಿಯ ಸುತ್ತ ಮಸಾಜ್ ಮಾಡಿ. ಇದರಿಂದ ತುಸು ನೋವು ಕಡಿಮೆ ಆಗುತ್ತದೆ
ತಾತ್ಕಾಲಿಕ ಶ್ರವಣ ಸಮಸ್ಯೆ ಇರುವವರು ಆ್ಯಪಲ್ ಸೈಡರ್ ವಿನೆಗರ್ ಅನ್ನು ಇದೇ ವಿಧಾನದಲ್ಲಿ ಬಳಸಬಹುದು. ಇದರಿಂದಲೂ ನೋವಿನ ಪ್ರಮಾಣ ಕಡಿಮೆಯಾಗಿ ಶ್ರವಣ ಶಕ್ತಿ ಮರುಕಳಿಸುವ ಸಾಧ್ಯತೆ ಉಂಟು ಹೇಳಲಾಗುತ್ತದೆ.