ಮುಚ್ಚಿದ್ದ ದೇವಾಲಯ ತೆರೆದ ಟಾಲಿವುಡ್ ನಟ ನಿಖಿಲ್ ಸಿದ್ದಾರ್ಥ್: ಹಾದಿ ಉದ್ದಕ್ಕೂ ಹೂಸುರಿದು ಸ್ವಾಗತಿಸಿದ ಗ್ರಾಮಸ್ಥರು
Wednesday, June 5, 2024
ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಭರವಸೆಯ ನಾಯಕನಟ ನಿಖಿಲ್ ಸಿದ್ದಾರ್ಥ್ ರನ್ನು ಪರಿಚಯ ಅಗತ್ಯವಿಲ್ಲ. ವಿಭಿನ್ನ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಟಾಲಿವುಡ್ ಹೀರೋಗಳಲ್ಲಿ ಇವರೂ ಒಬ್ಬರು.
ಇದೀಗ ಅವರು ಆಂಧ್ರಪ್ರದೇಶದ ಚಿರಾದಲ್ಲಿ ಕೆಲವು ವರ್ಷಗಳಿಂದ ಸೂಕ್ತ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆ ತಲುಪಿದ್ದ ದೇವಸ್ಥಾನವನ್ನು ಮತ್ತೆ ತೆರೆದಿದ್ದಾರೆ. ಬರೀ ದೇವಾಲಯವನ್ನು ತೆರೆಯುವುದು ಮಾತ್ರವಲ್ಲದೆ ಅದರ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ದೇವಸ್ಥಾನ ತೆರೆಯಲು ಬಂದ ನಿಖಿಲ್ ಅವರನ್ನು ಗ್ರಾಮಸ್ಥರು ಪುಷ್ಪಾರ್ಚನೆ ಮಾಡಿ ಆಹ್ವಾನಿಸಿದರು.
నిಖಿಲ್ ಇದರ ದೃಶ್ಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಗ್ರಾಮಸ್ಥರೆಲ್ಲಾ ನಿಖಿಲ್‌ರನ್ನು ಹಾದಿಉದ್ದಕ್ಕೂ ಹೂಗಳನ್ನು ಸುರಿದು ಕರೆದುಕೊಂಡು ಹೋಗುವುದನ್ನು ಕಾಣಬಹುದು. ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಿಖಿಲ್, ನಿಮ್ಮ ಸೇವೆ ಮಾಡುವ ಭಾಗ್ಯ ಅವರ ಕುಟುಂಬಕ್ಕೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ದೇವಸ್ಥಾನವನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿಖಿಲ್ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅಭಿಮಾನಿಗಳು ಮತ್ತು ನೆಟಿಜನ್‌ಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಕಾರ್ತಿಕೇಯ, ಸೂರ್ಯ Vs ಸೂರ್ಯ, ಎದೆರಿಕಿ ಪೋತಾವು ಚಿನ್ನವಾಡ, ಕೇಶವ, ಕಿರಾಕ್, ಅರ್ಜುನ್ ಸುರವರಂ, ಕಾರ್ತಿಕೇಯ 2, 18 ಪುಟಗಳಂತಹ ಸೂಪರ್ టో ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕಾರ್ತಿಕೇಯ 2 ಸಿನಿಮಾದ ಮೂಲಕ ನಾಯಕ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಫೇಮಸ್ ಆದರು. ಸ್ವಯಂಭೂ ಚಿತ್ರದಲ್ಲಿ ಸಂಯುಕ್ತಾ ಮೆನನ್ ಮತ್ತು ನಭಾ ನಟೇಶ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಿನಿಮಾಗಳ ಹೊರತಾಗಿ ನಾಯಕ ನಿಖಿಲ್ ಮಾಡಿರುವ ಕೆಲಸವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಸುರಿಮಳೆಯಾಗುತ್ತಿದೆ.
This TEMPLE was closed as punishment for the entire village.. we went and got it opened last month ... these sisters in Chirala were overjoyed... pic.twitter.com/ek7kTfkmk0
— Nikhil Siddhartha (@actor_Nikhil) June 4, 2024