Putturu: ತಾಳಿಯನ್ನು ಮನೆಯಲ್ಲಿ ಬಿಟ್ಟು 23 ವರ್ಷದ ವಿವಾಹಿತೆ ಪರಾರಿ!
Sunday, June 16, 2024
ಪುತ್ತೂರು: ತಾಳಿಯನ್ನು ಮನೆಯಲ್ಲಿಟ್ಟು ವಿವಾಹಿತೆ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸರ್ವೆ ಗ್ರಾಮದ ಭಕ್ತಕೋಡಿಯ ಕಲ್ಲಗುಡ್ಡೆಯ ಹರೀಶ ಅವರ ಪತ್ನಿ ದೀಪಿಕಾ (23) ನಾಪತ್ತೆಯಾದವರು.
ಜೂ.13ರಂದು ಮನೆಯಿಂದ ಕಾಣೆಯಾಗಿದ್ದು ಮನೆಯ ಸುತ್ತ ಮುತ್ತಲ ಪರಿಸರ ಮತ್ತು ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಆಕೆ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
3 ತಿಂಗಳ ಹಿಂದೊಮ್ಮೆ ನಾಪತ್ತೆಯಾಗಿದ್ದರು!
ಮೂರು ತಿಂಗಳ ಹಿಂದೆ ಕಡಬದ ಕರ್ಮಾಯಿ ನಿವಾಸಿ ಪ್ರಶಾಂತ್ ಜತೆಗೆ ಹೋಗಿದ್ದ ದೀಪಿಕಾ ಅವರನ್ನು ಮಂಗಳೂರಿನಲ್ಲಿ ಪತ್ತೆ ಮಾಡಿ ಅಲ್ಲಿಂದ ಕರೆದುಕೊಂಡು ಬರಲಾಗಿತ್ತು. ಈ ಬಾರಿಯೂ ಪ್ರಶಾಂತ್ ಜತೆ ತೆರಳಿರುವ ಬಗ್ಗೆ ಸಂಶಯವಿದೆ ಎಂದು ಹರೀಶ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.