ಮಂಗಳೂರು: ಮನೆಮಂದಿ ಮಲಗಿದ್ದಾಗಲೇ ಕಿಟಕಿ ಸರಳು ಮುರಿದು ಒಳನುಗ್ಗಿದ ಕಳ್ಳರು - 10ಸಾವಿರ ಎಗರಿಸಿ ಪರಾರಿ
Sunday, July 7, 2024
ಮಂಗಳೂರು: ಖತರ್ನಾಕ್ ಕಳ್ಳರ ಗುಂಪೊಂದು ರಾತ್ರಿವೇಳೆ ಮನೆಮಂದಿ ಮಲಗಿದ್ದಾಗಲೇ ಕಿಟಕಿ ಸರಳು ಮುರಿದು ಮನೆಯೊಳಗೆ ನುಗ್ಗಿ 10ಸಾವಿರ ರೂ. ಎಗರಿಸಿ ಪರಾರಿಯಾಗಿರುವ ಘಟನೆ ಶನಿವಾರ ನಸುಕಿನ ವೇಳೆ ಕೋಡಿಕಲ್ ವಿವೇಕಾನಂದ ನಗರದಲ್ಲಿ ನಡೆದಿದೆ.
ಕೋಡಿಕಲ್ ವಿವೇಕಾನಂದ ನಗರ ನಿವಾಸಿ ಪ್ರದೀಪ್ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಮನೆಯವರು ಬೆಡ್‌ರೂಂನಲ್ಲಿ ಮಲಗಿದ್ದಾಗಲೇ ಕಿಟಕಿ ಸರಳು ಮುರಿದು ಕಳ್ಳರ ತಂಡ ಮನೆಯೊಳಗೆ ನುಗ್ಗಿ ಕಪಾಟಿನಲ್ಲಿಟ್ಟಿದ್ದ 10,000 ಹಣ ಎಗರಿಸಿ ಪರಾರಿಯಾಗಿದೆ.
ಕಳ್ಳರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಐವರು ಇದ್ದ ಈ ತಂಡವನ್ನು ಗಮನಿಸಿದಾಗ ಇದೊಂದು ಪಕ್ಕಾ ಪ್ರೊಫೆಷನಲ್ ಕಳ್ಳರ ತಂಡ ಎಂಬಂತೆ ಭಾಸವಾಗುತ್ತಿದೆ. ಮುಖಕ್ಕೆ ಮಾಸ್ಕ್ ಧರಿಸಿ ಐವರೂ ಒಂದೇ ಮಾದರಿಯ ವಸ್ತ್ರದಲ್ಲಿ ಕಾಣುತ್ತಿದ್ದರು. ಕಳ್ಳರು ಮನೆಯ ಅಂಗಲ ಪ್ರವೇಶಿಸುವ ಮೊದಲು ಬೀದಿನಾಯಿಗಳು ಬೊಗಳುತ್ತಾ ಬಂದಿದೆ. ಆಗ ತಂಡದಲ್ಲೊಬ್ಬ ನಾಯಿಯನ್ನು ಓಡಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.