ಜು. 3 ರಂದು ಮಂಗಳೂರು ನಗರದ ಹಲವೆಡೆ ವಿದ್ಯುತ್ ನಿಲುಗಡೆ
Monday, July 1, 2024
ಮಂಗಳೂರು: ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ನೀರುಮಾರ್ಗ ಮತ್ತು 11 ಕೆ.ವಿ. ಕುಡುಪು ಫೀಡರ್ ಮಾಗ೯ಗಳ ವ್ಯಾಪ್ತಿಯಲ್ಲಿ ಜು.3 ರಂದು ವಿದ್ಯುತ್ ನಿಲುಗಡೆಯಾಗಲಿದೆ.
ಈ ಎರಡು ಫೀಡರ್ ಗಳಲ್ಲಿ ಜು.3 ರಂದು ಬೆಳಗ್ಗೆ 10 ರಿಂದ ಸಂಜೆ ಸಂಜೆ 5 ಗಂಟೆಯವರೆಗೆ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹೋಗಾಗಿ ಕುಡುಪು, ಕುಲಶೇಖರ, ಸರಿಪಲ್ಲ, ನೂಜಿ, ಸಿಲ್ವರ್‌ಗೇಟ್, ಡೈರಿ, ಬೈತುರ್ಲಿ, ಜೆ.ಹೆಚ್.ಬಿ ಲೇಔಟ್, ನೀರುಮಾರ್ಗ, ಚೌಕಿ, ಬಿತ್ತುಪಾದೆ, ಮಲ್ಲೂರು, ಬದ್ರಿಯಾನಗರ, ಪಡು, ದೆಮ್ಮಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.