-->
ರೆಡ್ ಅಲರ್ಟ್ ಹಿನ್ನೆಲೆ: ದ.ಕ.ಜಿಲ್ಲೆಯ ಶಾಲೆ - ಪಿಯು ಕಾಲೇಜುಗಳಿಗೆ ಇಂದು (ಜು.6) ರಜೆ

ರೆಡ್ ಅಲರ್ಟ್ ಹಿನ್ನೆಲೆ: ದ.ಕ.ಜಿಲ್ಲೆಯ ಶಾಲೆ - ಪಿಯು ಕಾಲೇಜುಗಳಿಗೆ ಇಂದು (ಜು.6) ರಜೆ



ಮಂಗಳೂರು: ಭಾರೀ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಈ ಕಾರಣದಿಂದ  ದ.ಕ.ಜಿಲ್ಲೆಯ ಶಾಲಾ - ಕಾಲೇಜುಗಳಿಗೆ ದ.ಕ.ಜಿಲ್ಲಾಧಿಕಾರಿ ಶನಿವಾರ ರಜೆ ಘೋಷಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ,  ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, (12ನೇ ತರಗತಿವರೆಗೆ) ಇಂದು ರಂದು ರಜೆಯನ್ನು ಘೋಷಿಸಲಾಗಿದೆ.



ಹವಾಮಾನ ಇಲಾಖೆ ಜೂ.6ರಂದು ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಈಗಾಗಲೇ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಭಾರೀ ಮಳೆ ಆಗುತ್ತಿರುವ ಕಾರಣ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

Ads on article

Advertise in articles 1

advertising articles 2

Advertise under the article