ಮಂಗಳೂರು: ಅಪ್ರಾಪ್ತೆಗೆ ಕಿರುಕುಳ - ಕಾಮುಕನಿಗೆ ಬಸ್‌ನಲ್ಲಿದ್ದ ಮಹಿಳೆಯರಿಂದಲೇ ಬಿತ್ತು ಗೂಸಾ
Sunday, July 14, 2024
ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ಕಾಮುಕನಿಗೆ ಬಾಲಕಿಯ ತಾಯಿ ಹಾಗೂ ಇತರ ಮಹಿಳಾ ಪ್ರಯಾಣಿಕರೇ ಸೇರಿ ಯದ್ವಾತದ್ವಾ ಗೂಸಾ ನೀಡಿರುವ ವೀಡಿಯೋ ವೈರಲ್ ಆಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಆರೋಪಿ ಪ್ರಯಾಣಿಸುತ್ತಿದ್ದ. ಈತನ ಪಕ್ಕದ ಸೀಟ್‌ನಲ್ಲಿ ಅಪ್ರಾಪ್ತೆಯೊಬ್ಬಳು ಕುಳಿತಿದ್ದಳು. ಬಸ್ ಸಕಲೇಶಪುರ ತಳುಪುತ್ತಿದ್ದ ವೇಳೆ ಬಾಲಕಿಯನ್ನು ಆರೋಪಿ ಮೆತ್ತಗೆ ಸ್ಪರ್ಶಿಸುತ್ತಿರುವುದನ್ನು ಗಮನಿಸಿ ಮತ್ತೊಂದು ಸೀಟ್‌ನಲ್ಲಿದ್ದ ಪ್ರಯಾಣಿಕ ವೀಡಿಯೋ ಮಾಡಿದ್ದಾನೆ. ಬಳಿಕ ಈ ವಿಚಾರವನ್ನು ಆತ ಬಾಲಕಿಯ ತಾಯಿಗೆ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ವಿಚಾರ ತಿಳಿದು ರೊಚ್ಚಿಗೆದ್ದ ತಾಯಿ ಹಾಗೂ ಮುಂದಿನ ಸೀಟ್‌ನಲ್ಲಿದ್ದ ಮಹಿಳಾ ಪ್ರಯಾಣಿಕರು ಆರೋಪಿಗೆ ಯದ್ವಾತದ್ವಾ ಗೂಸಾ ನೀಡಿದ್ದಾರೆ. ಸದ್ಯ ಅದರ ವೀಡಿಯೋ ವೈರಲ್ ಆಗಿದೆ. ವಿಚಾರ ತಿಳಿಯುತ್ತಿದ್ದಂತೆ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆಂಬ ಮಾಹಿತಿಯಿದೆ.