ಮಂಗಳೂರು: ಮನೆಗೆ ಮರಬಿದ್ದು ಬಾಲಕನಿಗೆ ಗಂಭೀರ ಗಾಯ
Friday, July 26, 2024
ಮಂಗಳೂರು: ಎಡಪದವು ಗ್ರಾಪಂ ವ್ಯಾಪ್ತಿಯ ಬ್ರಿಂಡೆಲ್ ಮತ್ತು ಪದ್ರೆಂಗಿ ಎಂಬಲ್ಲಿ ಎರಡು ಮನೆಗಳ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಆರು ವರ್ಷದ ಮಗು ಸೇರಿದಂತೆ ಮತ್ತೊರ್ವ ವ್ಯಕ್ತಿಗೆ ಗಾಯವಾಗಿದೆ.
ಪದ್ರೆಂಗಿ ಎಂಬಲ್ಲಿನ ರತ್ನಾಕರ್ ಎಂಬವರ ಮನೆಗೆ ಮರ ಉರುಳಿ ಬಿದ್ದಿದ್ದು, ಒಳಗಡೆ ಕೋಣೆಯಲ್ಲಿ ಮಲಗಿದ್ದ 6 ವರ್ಷದ ಆಯುಷ್ ಎಂಬ ಬಾಲಕ ಗಂಭೀರ ಗಾಯಗೊಂಡಿದ್ದಾನೆ. ಮಗುವಿನ ಹಲ್ಲುಗಳು ಜಖಂಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ರತ್ನಾಕರ್ ಅವರ ಸಹೋದರ, ಆತನ ಪತ್ನಿಗೂ ಗಾಯವಾಗಿದೆ. ರತ್ನಾಕರ್ ಅವರ ಮನೆಗೂ ಭಾಗಶಃ ಹಾನಿಯಾಗಿದೆ. ಬ್ರಿಂಡೇಲ್ ಎಂಬಲ್ಲಿ ಶೋಭಾ ಎಂಬವರ ಮನೆಗೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮರ ಬೀಳುವ ವೇಳೆ ಮನೆಯೊಳಗಿದ್ದವರು ಮನೆಯಿಂದ ಹೊರಗೆ ಓಡಿ ಬಂದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ.