-->
ಮಂಗಳೂರು: ಅಡಿಕೆ ವ್ಯಾಪಾರಿಗಳಿಗೆ ಗುಜರಾತಿನ ಶೇಟುಗಳಿಂದ ಕೋಟ್ಯಂತರ ಹಣ ವಂಚನೆ

ಮಂಗಳೂರು: ಅಡಿಕೆ ವ್ಯಾಪಾರಿಗಳಿಗೆ ಗುಜರಾತಿನ ಶೇಟುಗಳಿಂದ ಕೋಟ್ಯಂತರ ಹಣ ವಂಚನೆ



ಮಂಗಳೂರು: ಮಂಗಳೂರಿನ ಅಡಿಕೆ ವ್ಯಾಪಾರಿಗಳಿಗೆ ಗುಜರಾತ್ ಮೂಲದ ಅಡಿಕೆ ವ್ಯಾಪಾರಿ ಕಂಪೆನಿಗಳ ಶೇಟುಗಳು ಕೋಟಿಗಟ್ಟಲೆ ಹಣ ವಂಚನೆಗೈದಿರುವ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರ್ಲೀನ್ ಟ್ರೇಂಡಿಂಗ್ ಕಂಪೆನಿ, ವಿಮಲ್ ಬ್ರದರ್ಸ್ ಹಾಗೂ ಕಮಲೇಶ್ ಪಡಾಲಿಯಾ ಎಂಬ ಕಂಪೆನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪರ್ಲೀನ್ ಟ್ರೇಡಿಂಗ್ ಕಂಪನಿಯು 1.34 ಕೋಟಿ ರೂ. ಹಾಗೂ ವಿಮಲ್ ಬ್ರದರ್ಸ್ ಕಂಪೆನಿಯು 1.21 ಕೋಟಿ ರೂ. ವಂಚನೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮತ್ತೊಂದು ವಿಮಲ್ ಬ್ರದರ್ಸ್ ಕಂಪೆನಿಯ  ಮಾಲಕಲಲರಾದ ಕಮಲೇಶ್ ಪಡಾಲಿಯಾ ಮತ್ತು ಆತನ ಪತ್ನಿ ರೋಹಿಣಿ 59.62 ಲಕ್ಷ ರೂ. ವಂಚಿಸಿದ್ದಾರೆ. ಆರೋಪಿಗಳು ತಮ್ಮ ಕಂಪೆನಿಯನ್ನು ಮುಚ್ಚಿ ಅದರಲ್ಲಿದ್ದ 115 ಚೀಲ ಅಡಿಕೆಯನ್ನು ಸಂಬಂಧಿಕರ ಗೋದಾಮಿಗೆ ಸ್ಥಳಾಂತರಿಸಿದ್ದಾರೆ. ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಎಂದು ಪ್ರತಿಕ್ರಿಯೆ ಬರುತ್ತಿದೆ' ಎಂದು ಹಬೀಬ್ ರಹಿಮಾನ್ ಕೆ. ಅವರು ದೂರು ನೀಡಿದ್ದಾರೆ.

ವಿಮಲ್ ಬ್ರದರ್ಸ್ ಕಂಪೆನಿಯು 25.25 ಲಕ್ಷ ರೂ. ವಂಚಿಸಿದೆ ಎಂದು ಎಸ್.ಆರ್.ಟ್ರೇಡಿಂಗ್ ಕಂಪನಿಯ ಪಾಲುದಾರ ಶ್ರೀಪತಿ ಭಟ್ ಮತ್ತು ಕೆ.ಎಸ್.ನಾರಾಯಣ ಭಟ್ ದೂರಿನಲ್ಲಿ ತಿಳಿಸಿದ್ದಾರೆ. ತನಗೆ 36.39 ಲಕ್ಷ ರೂ. ವಂಚನೆಯಾಗಿದೆ ಎಂದು ಎ.ಎ.ಸುಪಾರಿ ಟ್ರೇಡಿಂಗ್ ಕಂಪನಿಯ ಮಾಲೀಕ ಅಬ್ದುಲ್ ರಹಿಮಾನ್ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಡಿಕೆ ಖರೀಸಿದ್ದ ಗುಜರಾತಿನ ವರ್ತಕ ಕಮಲೇಶ್ ಪಡಾಲಿಯಾ 8.99 ಲಕ್ಷ ರೂ. ಹಣವನ್ನು ನೀಡದೇ ವಂಚಿಸಿದ ಬಗ್ಗೆ ಬೀಬಿ ಅಲಾಬಿ ರಸ್ತೆಯ ಒಣ ಅಡಿಕೆ ವ್ಯಾಪಾರಿ ಯೂಸುಫ್ ದೂರು ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article