-->
 ವಿವಾದಿತ ಟ್ರೇನಿ IAS ಅಧಿಕಾರಿ ಪೂಜಾ ಖೇಡ್ಕರ್ 'ಎಲ್ಲ ಸರ್ಕಾರಿ ಹುದ್ದೆಗಳಿಂದ ಶಾಶ್ವತ ನಿಷೇಧ'

ವಿವಾದಿತ ಟ್ರೇನಿ IAS ಅಧಿಕಾರಿ ಪೂಜಾ ಖೇಡ್ಕರ್ 'ಎಲ್ಲ ಸರ್ಕಾರಿ ಹುದ್ದೆಗಳಿಂದ ಶಾಶ್ವತ ನಿಷೇಧ'




ನವದೆಹಲಿ: ಆಡಳಿತ ದುರುಪಯೋಗ ಮತ್ತು ನಕಲಿ ದಾಖಲೆ ನೀಡಿ ಅಕ್ರಮ ನೇಮಕ ಆರೋಪ ಎದುರಿಸುತ್ತಿರುವ ಪೂಜಾ ಖೇಡ್ಕರ್ ಅವರನ್ನು ಪ್ರೊಬೇಷನರಿ IAS ಹುದ್ದೆಯಿಂದ ಕಿತ್ತು ಹಾಕಲಾಗಿದೆ. ಜೊತೆಗೆ ಮುಂದಿನ ಎಲ್ಲ ಪರೀಕ್ಷೆಗಳಿಂದ ಶಾಶ್ವತವಾಗಿ ನಿಷೇಧಿಸಿ ಕೇಂದ್ರ ಲೋಕಸೇವಾ ಆಯೋಗ (UPSC) ಜುಲೈ 31 ರಂದು ಆದೇಶಿಸಿದೆ.

ಪೂಜಾ ಖೇಡ್ಕರ್ ಅವರುIAS ಪರೀಕ್ಷೆ ಮತ್ತು ನೇಮಕಾತಿ ವೇಳೆ ನೀಡಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ ನಕಲಿ ದಾಖಲೆಗಳು ಕಂಡು ಬಂದಿರುವುದು ಸಾಬೀತಾಗಿದೆ. ಈ ಬಗ್ಗೆ ಅವರ ಪ್ರತಿಕ್ರಿಯೆಯನ್ನೂ ಕೋರಿದ್ದು, ಅವರು ಈವರೆಗೂ ಯಾವುದೇ ಉತ್ತರವನ್ನು ನೀಡಿಲ್ಲ. ಹೀಗಾಗಿ ಅವರ ವಿರುದ್ಧ ನಿಷೇಧ ಹೇರಲಾಗಿದೆ ಎಂದು UPSC ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪೂಜಾ ಖೇಡ್ಕರ್ ಅವರು ಸಲ್ಲಿಸಿದ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗಿದೆ. ಇದರಲ್ಲಿ ನಾಗರಿಕ ಸೇವಾ ಪರೀಕ್ಷೆಗಳ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ಕಂಡುಬಂದಿದೆ. ಹೀಗಾಗಿ ಅವರನ್ನು ತಕ್ಷಣದಿಂದಲೇ ಅನ್ವಯಯವಾಗುವಂತೆ ಪ್ರೊಭೇಷನರಿ IAS ಹುದ್ದೆ ಮತ್ತು ಭವಿಷ್ಯದಲ್ಲಿ ಯಾವುದೇ ಪರೀಕ್ಷೆಗಳಿಗೆ ಅರ್ಹರಾಗದಂತೆ ಶಾಶ್ವತ ನಿರ್ಬಂಧ ಹೇರಲಾಗಿದೆ ಎಂದಿದೆ.

ಪರೀಕ್ಷೆಗಳಿಗೆ ಹಾಜರಾಗಲು ಇದ್ದ ಎಲ್ಲ ಮಿತಿಗಳನ್ನು ಪೂಜಾ ಖೇಡ್ಕರ್ ಅವರು ಉಲ್ಲಂಘನೆ ಮಾಡಿದ್ದಾರೆ. ಅವರ ಗುರುತನ್ನು ಮರೆಮಾಚುವ ಮೂಲಕ ಅಕ್ರಮವಾಗಿ ಪರೀಕ್ಷೆ ಬರೆದು ನೇಮಕಾತಿಯಾಗಿದ್ದಾರೆ. ಮೋಸದ ಎಲ್ಲ ಪರಿಧಿಯನ್ನು ಅವರು ದಾಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವಂತೆ ಅವರಿಗೆ ಜುಲೈ 18 ರಂದು ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ.

ಜುಲೈ 25 ರೊಳಗೆ ಶೋಕಾಸ್ ನೋಟಿಸ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಬೇಕಾಗಿತ್ತು. ನಕಲಿ ದಾಖಲೆಗಳನ್ನು ನೀಡಿದ ಆರೋಪಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಆಗಸ್ಟ್ 4ರ ವರೆಗೆ ಸಮಯ ಕೋರಿದ್ದರು. ಜುಲೈ 30 ರಂದು ಮಧ್ಯಾಹ್ನ 3:30 ರೊಳಗೆ ಪ್ರತಿಕ್ರಿಯೆ ಸಲ್ಲಿಸಲು UPSC ಅವರಿಗೆ ಅಂತಿಮ ಗಡುವು ನೀಡಿತ್ತು. ಆದರೆ, ಅವರು ನಿಗದಿತ ಸಮಯದೊಳಗೆ ತಮ್ಮ ವಿವರಣೆಯನ್ನು ಸಲ್ಲಿಸಲು ವಿಫಲರಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್, ತಮ್ಮ ವೈಯಕ್ತಿಕ ಕಾರಿನ ಮೇಲೆ 'ಮಹಾರಾಷ್ಟ್ರ ಸರ್ಕಾರ' ಎಂದು ಅನಧಿಕೃತವಾಗಿ ಬರೆದುಕೊಂಡಿದ್ದಲ್ಲದೇ, ಕೆಂಪು ದ್ವೀಪವನ್ನು ಅಳವಡಿಸಿಕೊಂಡಿದ್ದರು. ಜೊತೆಗೆ ಅಧಿಕಾರಿಯೊಬ್ಬರ ಕಚೇರಿಯನ್ನು ಅಕ್ರಮವಾಗಿ ತಮ್ಮ ವಶದಲ್ಲಿರಿಸಿಕೊಂಡಿದ್ದರು. ಕಚೇರಿಗೆ ದುಬಾರಿ ವಸ್ತುಗಳನ್ನು ಅಳವಡಿಸಿದ್ದರು. ಇದಾದ ಬಳಿಕ ಅವರು ತಮ್ಮ ಗುರುತನ್ನು ಬದಲಿಸಿ ಹಲವು ಬಾರಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದಲ್ಲದೇ, ನೇಮಕಾತಿ ವೇಳೆ ನಕಲಿ ದಾಖಲೆ ನೀಡಿದ್ದಾರೆ ಎಂಬ ಆರೋಪವು ಕೇಳಿಬಂದಿತ್ತು.


Ads on article

Advertise in articles 1

advertising articles 2

Advertise under the article